ಲಖನೌ: ಸೋನ್‌ಭದ್ರ ಹತ್ಯಾಕಾಂಡದ ಸಂತ್ರಸ್ತರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭಾನುವಾರ ಭೇಟಿಯಾಗಿದ್ದಾರೆ. ಸಂತ್ರಸ್ತರ ಕುಟುಂಬ ಸದಸ್ಯರೊಂದಿಗೆ ಮಾತನಾಡಿದ ಆದಿತ್ಯನಾಥ ಸೋನ್‌ಭದ್ರ ಶೂಟೌಟ್‌ನಲ್ಲಿ ಸಾವಿಗೀಡಾದವರ ಕುಟುಂಬದ ಸದಸ್ಯರಿಗೆ ₹18.5 ಲಕ್ಷ ಮತ್ತು ಗಾಯಗೊಂಡವರಿಗೆ ₹2.5 ಲಕ್ಷ ಪರಿಹಾರ ಧನ ಘೋಷಿಸಿದ್ದಾರೆ.
ಜುಲೈ17ರಂದು ಸೋನ್‌ಭದ್ರದ ಘೋರವಾಲ್ ಪ್ರದೇಶದಲ್ಲಿ ಜಮೀನೊಂದಕ್ಕೆ ಸಂಬಂಧಿಸಿದಂತೆ ಗ್ರಾಮದ ಮುಖ್ಯಸ್ಥ ಹಾಗೂ ಗೊಂಡ ಬುಡಕಟ್ಟು ಜನರ ಮಧ್ಯೆ ಮಾರಾಮಾರಿ ನಡೆದಿತ್ತು. ಈ ಸಂದರ್ಭದಲ್ಲಿ ಬುಡಕಟ್ಟು ಜನರ ಮೇಲೆ ಗ್ರಾಮದ ಮುಖ್ಯಸ್ಥರ ಕಡೆಯವರು ಗುಂಡಿನ ದಾಳಿ ನಡೆಸಿದ್ದರಿಂದ 10 ಮಂದಿ ಹತರಾಗಿ, 23ಮಂದಿಗಾಯಗೊಂಡಿದ್ದರು. ಈ ಘಟನೆಯು ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನ ಉಂಟುಮಾಡಿತ್ತು. ಗೊಂಡರನ್ನು ಈ ಗ್ರಾಮದಲ್ಲಿ ದಲಿತರೆಂದ ಪರಿಗಣಿಸಲಾಗುತ್ತದೆ.
ಈ ಘಟನೆಗೆ ಕಾರಣವಾದ ಪೊಲೀಸ್ ಸಿಬ್ಬಂದಿಗಳನ್ನು ವಜಾ ಮಾಡುವಂತೆ ಸರ್ಕಾರ ಆದೇಶಿಸಿದೆ.ಸಾವಿಗೀಡಾದ ವ್ಯಕ್ತಿಗಳ ಕುಟುಂಬಕ್ಕೆ ₹18.5 ಲಕ್ಷ ಪರಿಹಾರ ಧನ ಮತ್ತು ಗಾಯಗೊಂಡವರಿಗೆ ₹2.5 ಲಕ್ಷ ಪರಿಹಾರ ಧನವನ್ನು ಸಿಎಂ ಪರಿಹಾರ ನಿಧಿ (ಎಸ್‌ಸಿ/ಎಸ್‌ಟಿಗಾಗಿರುವುದು)ಯಿಂದ ನೀಡಲು ಆದೇಶಿಸಿದ್ದೇನೆ ಎಂದು ಆದಿತ್ಯನಾಥ ಹೇಳಿರುವುದಾಗಿ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಶುಕ್ರವಾರ ಸೋನ್‌ಭದ್ರಾ ಸಂತ್ರಸ್ತರನ್ನು ಭೇಟಿ ಮಾಡಲು ಹೋಗಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪೊಲೀಸರು ತಡೆದು ನಿಲ್ಲಿಸಿದ್ದರು, ಇದೀಗ ಆದಿತ್ಯನಾಥ ಸೋನ್‌ಭದ್ರ ಭೇಟಿ ನೀಡಿರುವುದರ ಬಗ್ಗೆ ಅಣಕವಾಡಿದ ಪ್ರಿಯಾಂಕಾ, ತಮ್ಮ ಕರ್ತವ್ಯ ಏನೆಂದು ಅರಿತುಕೊಂಡಿರುವುದು ಒಳ್ಳೆಯದೇ.ಸೋನ್‌ಭದ್ರಕ್ಕೆ ಭೇಟಿ ನೀಡಿದ ಆದಿತ್ಯನಾಥರ ತೀರ್ಮಾನವನ್ನು ನಾನು ಸ್ವಾಗತಿಸುತ್ತೇನೆ.ಅದು ವಿಳಂಬವಾಗಿರಬಹುದು. ಆದರೆ ಸಂತ್ರಸ್ತರೊಂದಿಗೆ ನಿಲ್ಲುವುದು ಸರ್ಕಾರದ ಕರ್ತವ್ಯ ಎಂದು ಟ್ವೀಟಿಸಿದ್ದಾರೆ.
ಇದನ್ನೂ ಓದಿ:
ಸೋನ್‌ಭದ್ರ ಹತ್ಯಾಕಾಂಡ ಸಂತ್ರಸ್ತರ ಸಂತೈಸಿದ ಪ್ರಿಯಾಂಕಾ ಗಾಂಧಿ
ಉತ್ತರ ಪ್ರದೇಶ: ಗೊಂಡರ ಭೇಟಿಗೆ ಹೊರಟ ಪ್ರಿಯಾಂಕಾಗೆ ತಡೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.