ADVERTISEMENT

ಕುಂಭಮೇಳದಲ್ಲಿ ವಿಶ್ವ ದಾಖಲೆಗೆ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2019, 18:39 IST
Last Updated 3 ಫೆಬ್ರುವರಿ 2019, 18:39 IST
ಸಂಗಮದಲ್ಲಿ ಸ್ನಾನ ಮಾಡುತ್ತಿರುವ ಭಕ್ತಾದಿಗಳು   ಪಿಟಿಐ ಚಿತ್ರ
ಸಂಗಮದಲ್ಲಿ ಸ್ನಾನ ಮಾಡುತ್ತಿರುವ ಭಕ್ತಾದಿಗಳು   ಪಿಟಿಐ ಚಿತ್ರ   

ಪ್ರಯಾಗ್‌ರಾಜ್‌: ಇಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಮೂರು ವಿಶ್ವ ದಾಖಲೆಗಳನ್ನು ಸ್ಥಾಪಿಸಲು ಉತ್ತರ ಪ್ರದೇಶ ಆಡಳಿತ ಪ್ರಯತ್ನಿಸುತ್ತಿದೆ.

‘ಸ್ವಚ್ಛತೆ, ಸಾರಿಗೆ ಮತ್ತು ನಗರದೆಲ್ಲೆಡೆ ಬಣ್ಣಗಳಿಂದ ಕಳೆ ಅರಳಿಸಿರುವ ವಿಷಯದಲ್ಲಿ ದಾಖಲೆಗಳನ್ನು ಸ್ಥಾಪಿಸುವ ಉದ್ದೇಶವಿದೆ’ ಎಂದು ವಿಭಾಗೀಯ ಆಯುಕ್ತ ಆಶೀಶ್‌ ಗೋಯಲ್‌ ತಿಳಿಸಿದ್ದಾರೆ.

‘ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರ ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಂಡಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವೈವಿಧ್ಯತೆ ಹೊಂದಿರುವ ಕುಂಭ ಮೇಳದಲ್ಲಿ ಪ್ರತಿಯೊಬ್ಬರಿಗೂ ಏನಾದರೂ ದೊರೆಯುವಂತೆ ಮಾಡಿದ್ದೇವೆ. ಹಿರಿಯರು, ಕಿರಿಯರು, ಭಾರತೀಯರು, ವಿದೇಶಿಯರು ಮೇಳದಲ್ಲಿ ಭಾಗವಹಿಸಿದ್ದಕ್ಕೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಯಾತ್ರಾರ್ಥಿಗಳು ಮುಖ್ಯವಾಗಿ ಭದ್ರತೆ ಮತ್ತು ಸ್ವಚ್ಛತೆ ಬಗ್ಗೆ ಹೆಚ್ಚು ಗಮನಹರಿಸುತ್ತಾರೆ. ಜನರಿಗೆ ಅನುಕೂಲ ಕಲ್ಪಿಸಲು ಅಪಾರ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಜತೆಗೆ, ಶೌಚಾಲಯಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿವೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.