ಬೆಂಗಳೂರು: ರಾಜ್ಯಸಭಾ ಸದಸ್ಯರ ವಿದ್ಯಾರ್ಹತೆ, ಆಸ್ತಿ ವಿವರ, ಅವರ ಮೇಲಿರುವ ಅಪರಾಧ ಪ್ರಕರಣಗಳ ಕುರಿತ ವಿಸ್ತೃತ ವರದಿಯನ್ನು ಅಸೋಸಿಯೇಷನ್ ಫಾರ್ ಡೆಮೊಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಬಿಡುಗಡೆ ಮಾಡಿದ್ದು, ಒಟ್ಟು ಸದಸ್ಯರ ಪೈಕಿ 27 (ಶೇ 12) ಸದಸ್ಯರು ಶತಕೋಟ್ಯಧಿಪತಿಗಳು ಎಂದು ತಿಳಿದುಬಂದಿದೆ. ಇವರಲ್ಲಿ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಸಂಸದರೇ ಹೆಚ್ಚು ಶ್ರೀಮಂತರು ಎಂದು ವರದಿಯಲ್ಲಿ ಹೇಳಲಾಗಿದೆ.
ಎಡಿಆರ್ ಹಾಗೂ ನ್ಯಾಷನಲ್ ಎಲೆಕ್ಷನ್ ವಾಚ್ ಸಂಸ್ಥೆಗಳು ಜಂಟಿಯಾಗಿ ವರದಿ ಸಿದ್ಧಪಡಿಸಿದ್ದು, ಒಟ್ಟು 250 ಸದಸ್ಯರ ಪೈಕಿ 225 ಸಂಸದರ ವಿವರಗಳನ್ನು ಮಾತ್ರ ವರದಿಗಾಗಿ ಪರಿಗಣಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.