ADVERTISEMENT

185 ಮಾವಿನಕಾಯಿಗಳ ಕಳ್ಳತನ: ನೂರು ವರ್ಷದ ಹಿಂದಿನ ಕೋರ್ಟ್ ಆದೇಶ ‍ಪ್ರತಿ ಪತ್ತೆ!

ಠಾಣೆ ನಗರದ ವಕೀಲರಾದ ಪುನೀತ್ ಮಹಿಮಾಕರ್ ಅವರಿಗೆ ಈ ಅಪರೂಪದ ಪತ್ರ ಸಿಕ್ಕಿದೆ.

ಪಿಟಿಐ
Published 19 ಮೇ 2024, 10:29 IST
Last Updated 19 ಮೇ 2024, 10:29 IST
<div class="paragraphs"><p>ಮಾವಿನಕಾಯಿ&nbsp;</p></div>

ಮಾವಿನಕಾಯಿ 

   

ಸಾಂದರ್ಭಿಕ ಚಿತ್ರ

ಠಾಣೆ, ಮಹಾರಾಷ್ಟ್ರ: ನೂರು ವರ್ಷಗಳ ಹಿಂದೆ ಬ್ರಿಟಿಷ್ ಭಾರತದಲ್ಲಿನ ನ್ಯಾಯಾಧೀಶರೊಬ್ಬರು ಕಳ್ಳತನ ಪ್ರಕರಣವೊಂದರಲ್ಲಿ ನಾಲ್ವರಿಗೆ ಶಿಕ್ಷೆ ವಿಧಿಸಿದ ಆದೇಶದ ಪತ್ರ ಮಹಾರಾಷ್ಟ್ರದ ಠಾಣೆ ನಗರದ ವಕೀಲರೊಬ್ಬರಿಗೆ ಸಿಕ್ಕಿದೆ.

ADVERTISEMENT

ವಕೀಲರಾದ ಪುನೀತ್ ಮಹಿಮಾಕರ್ ಅವರಿಗೆ ಈ ಅಪರೂಪದ ಪತ್ರ ಸಿಕ್ಕಿದೆ. ಅವರು ಇತ್ತೀಚೆಗೆ ತಮ್ಮ ಬಾಡಿಗೆ ಮನೆಯಿಂದ ಸ್ಥಳಾಂತರಗೊಳ್ಳುವಾಗ ಮನೆಯ ಅಟ್ಟದ ಮೇಲಿದ್ದ ಚೀಲವೊಂದನ್ನು ಪರಿಶೀಲಿಸಿದಾಗ ಪತ್ರ ಇರುವುದು ಬಹಿರಂಗವಾಗಿದೆ.

ಆದೇಶ ಪತ್ರದಲ್ಲಿ ಏನಿದೆ?

ಠಾಣೆ ಬಳಿಯ ಬ್ರಿಟಿಷ್ ವ್ಯಕ್ತಿ ಬೋಸ್ಟಿವ್ ಎಲ್ಲಿಸ್ ಆ್ಯಂಡರ್‌ಡೆನ್ ಎಂಬುವರ ತೋಟದಿಂದ ನಾಲ್ವರು ವ್ಯಕ್ತಿಗಳು (ಎಂಜಲೋ ಅಲ್ವಾರಸ್ ಹಾಗೂ ಇತರರು) 185 ಮಾವಿನಕಾಯಿಗಳನ್ನು ಕದ್ದಿದ್ದರು. ಈ ನಾಲ್ವರ ಮೇಲೆ ಐಪಿಸಿ ಸೆಕ್ಷನ್ 379/109 ಅಡಿ ಪ್ರಕರಣ ದಾಖಲಾಗಿತ್ತು. ಇವರ ಮೇಲಿನ ಆರೋಪವನ್ನು ಸಾಬೀತುಪಡಿಸಲಾಗಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿ 1924ರ ಜುಲೈ 5 ರಂದು ಆದೇಶ ಪ್ರಕಟಿಸಿದ್ದ ನ್ಯಾಯಾಧೀಶ ಟಿ.ಎ. ಫರ್ನಾಂಡೀಸ್ ಎನ್ನುವರು, ‘ಮಾವಿನ ಕಾಯಿಗಳನ್ನು ಕದ್ದ ಆರೋಪ ಸಾಬೀತಾಗಿರುವುದರಿಂದ ನಾಲ್ವರಿಗೂ ಶಿಕ್ಷೆ ವಿಧಿಸುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ಅಪರಾಧಿಗಳು ಯುವಕರಾಗಿರುವುದರಿಂದ ಹಾಗೂ ಅವರು ಈ ಹಿಂದೆ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದೇ ಇರುವುದರಿಂದ ಅವರಿಗೆ ಜೈಲು ಶಿಕ್ಷೆ ವಿಧಿಸದೇ ಅವರನ್ನು ಬಿಡುಗಡೆ ಮಾಡಲು ಆದೇಶಿಸುತ್ತೇನೆ. ಅವರು ಉತ್ತಮ ಜೀವನ ರೂಪಿಸಿಕೊಳ್ಳಬೇಕು’ ಎಂದು ಆದೇಶ ಪ್ರಕಟಿಸಿದ್ದರು.

ಈ ಅಪರೂಪದ ಆದೇಶ ಪತ್ರದ ಬಗ್ಗೆ ಸುದ್ದಿಸಂಸ್ಥೆ ಪಿಟಿಐ ಜೊತೆ ಮಾತನಾಡಿರುವ ವಕೀಲ ಪುನೀತ್ ಮಹಿಮಾಕರ್ ಅವರು, ‘ಬಹುಶಃ ನಾನಿದ್ದ ಮನೆಯಲ್ಲಿ ಈ ಹಿಂದೆ ಇದ್ದ ವ್ಯಕ್ತಿಗಳು ಪತ್ರವನ್ನು ಬಿಟ್ಟು ಹೋಗಿರಬಹುದು. ಅದರ ಜೊತೆ ಕೆಲವು ಆಸ್ತಿ ದಾಖಲೆಗಳೂ ಸಿಕ್ಕಿವೆ. ಅದರಲ್ಲೂ ಟಿ.ಎ. ಫರ್ನಾಂಡೀಸ್ ನ್ಯಾಯಾಧೀಶರ ಈ ಆದೇಶ ಪ್ರತಿಯನ್ನು ಸಂರಕ್ಷಿಸಿ ಇಡುತ್ತೇನೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.