ನವದೆಹಲಿ: ಸಂವಿಧಾನದ 370ನೇ ವಿಧಿಯನ್ನು ಅಸಿಂಧುಗೊಳಿಸಿ ರಾಷ್ಟ್ರಪತಿ ಹೊರಡಿಸಿದ ಆದೇಶದ ಸಿಂಧುತ್ವವನ್ನು ಪ್ರಶ್ನಿಸಿ ವಕೀಲರೊಬ್ಬರು ಮಂಗಳವಾರ ಸುಪ್ರೀಂ ಕೋರ್ಟ್ ಮೊರೆಹೋಗಿದ್ದಾರೆ.
‘ರಾಷ್ಟ್ರಪತಿ ಹೊರಡಿಸಿರುವ ಆದೇಶವೇ ಅಸಾಂವಿಧಾನಿಕ. ಸರ್ಕಾರವು ಇಂಥ ಆದೇಶದ ಮೂಲಕ ಕೆಲಸ ಮಾಡುವ ಬದಲು, ಸಂಸತ್ತಿನ ಮಾರ್ಗದಲ್ಲಿ ಕ್ರಮಿಸಿ 370ನೇ ವಿಧಿಯನ್ನು ಅಸಿಂಧುಗೊಳಿಸಬೇಕಾಗಿತ್ತು. 370ನೇ ವಿಧಿಯಲ್ಲಿ ಉಲ್ಲೇಖವಾಗಿರುವ ಕಲಮಿನ ಆಧಾರದಲ್ಲೇ ಆ ವಿಧಿಯನ್ನು ಅಸಿಂಧುಗೊಳಿಸಲು ಸಾಧ್ಯವಿಲ್ಲ’ ಎಂದು ವಕೀಲ ಮನೋಹರ ಲಾಲ್ ಶರ್ಮಾ ಅವರು ಅರ್ಜಿಯಲ್ಲಿ ಹೇಳಿದ್ದಾರೆ.
ಅರ್ಜಿಯನ್ನು ಬುಧವಾರವೇ ತುರ್ತು ವಿಚಾರಣೆಗೆ ಎತ್ತಿಕೊಳ್ಳಬಹುದು ಎಂಬ ವಿಶ್ವಾಸವನ್ನು ಶರ್ಮಾ ಅವರು ವ್ಯಕ್ತಪಡಿಸಿದ್ದಾರೆ.
ಜಮ್ಮು ಕಾಶ್ಮೀರಕ್ಕೆ ನೀಡಿರುವ ವಿಶೇಷ ಅಧಿಕಾರವನ್ನು ರದ್ದು ಮಾಡಿದರೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂಬುದನ್ನು ಕೇಂದ್ರ ನಿರೀಕ್ಷಿಸಿತ್ತು. ಆದರೆ ಅಂಥ ಕಾನೂನು ಹೋರಾಟಗಳಲ್ಲೂ ಗೆಲ್ಲುವ ವಿಶ್ವಾಸವನ್ನು ಸರ್ಕಾರ ವ್ಯಕ್ತಪಡಿಸಿದೆ.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.