ADVERTISEMENT

ಅಫ್ಗಾನಿಸ್ತಾನದಿಂದ ಬರುತ್ತಿರುವವರಿಗೆ ಭಾರತದಲ್ಲಿ ಪೋಲಿಯೊ ಲಸಿಕೆ

ಪಿಟಿಐ
Published 22 ಆಗಸ್ಟ್ 2021, 9:35 IST
Last Updated 22 ಆಗಸ್ಟ್ 2021, 9:35 IST
ಅಫ್ಗಾನಿಸ್ತಾನದಿಂದ ಭಾರತಕ್ಕೆ ಮರಳಿದವರಿಗೆ ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೋಲಿಯೊ ಲಸಿಕೆ ನೀಡುತ್ತಿರುವ ದೃಶ್ಯ
ಅಫ್ಗಾನಿಸ್ತಾನದಿಂದ ಭಾರತಕ್ಕೆ ಮರಳಿದವರಿಗೆ ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೋಲಿಯೊ ಲಸಿಕೆ ನೀಡುತ್ತಿರುವ ದೃಶ್ಯ   

ನವದೆಹಲಿ: ಅಫ್ಗಾನಿಸ್ತಾನದಿಂದ ಭಾರತಕ್ಕೆ ಮರಳುತ್ತಿರುವವರಿಗೆ ಉಚಿತವಾಗಿ ಪೋಲಿಯೊ ಲಸಿಕೆ ನೀಡಲು ಭಾರತ ನಿರ್ಧರಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಭಾನವಾರ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್‌ನಲ್ಲಿ ಮಾಹಿತಿ ನೀಡಿರುವ ಸಚಿವರು, ದೇಶಕ್ಕೆ ಮರಳುತ್ತಿರುವವರಿಗೆ ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಸಿಕೆ ನೀಡುತ್ತಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ.

ವಿಶ್ವದಲ್ಲಿ ಅಫ್ಗಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಮಾತ್ರ ಪೋಲಿಯೊ ರೋಗ ಇದೆ. ಹೀಗಾಗಿ ಭಾರತ ಸರ್ಕಾರ ಅಫ್ಗನ್‌ನಿಂದ ಮರಳುತ್ತಿರುವವರಿಗೆ ಪೋಲಿಯೊ ಲಸಿಕೆ ನೀಡುವ ಕ್ರಮ ತೆಗೆದುಕೊಂಡಿದೆ.

ADVERTISEMENT

ತಾಲಿಬಾನ್‌ ಹಿಡಿತದಲ್ಲಿರುವ ಅಫ್ಗಾನಿಸ್ತಾನದಿಂದ ಭಾನುವಾರ ಐಎಎಫ್‌ನ ಸೇನಾ ಸಾರಿಗೆ ವಿಮಾನದ ಮೂಲಕ 107 ಭಾರತೀಯರೂ ಸೇರಿದಂತೆ 168 ಜನರನ್ನು ಭಾರತಕ್ಕೆ ಸ್ಥಳಾಂತರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.