ADVERTISEMENT

ನವಿ ಮುಂಬೈ | ₹1 ಕೋಟಿ ಮೌಲ್ಯದ ಕೊಕೇನ್‌ ವಶ: ಆರೋಪಿ ಬಂಧನ

ಪಿಟಿಐ
Published 30 ಅಕ್ಟೋಬರ್ 2024, 13:06 IST
Last Updated 30 ಅಕ್ಟೋಬರ್ 2024, 13:06 IST
   

ಠಾಣೆ: ನವಿ ಮುಂಬೈನಲ್ಲಿ ₹1.02 ಕೋಟಿ ಮೌಲ್ಯದ ಕೊಕೇನ್‌ ಹೊಂದಿದ್ದ 36 ವರ್ಷದ ಆಫ್ರಿಕಾ ಮೂಲದ ಪ್ರಜೆಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. 

ಸುಳಿವಿನ ಮೇರೆಗೆ, ನವಿ ಮುಂಬೈನ ಮಾನವ ಕಳ್ಳಸಾಗಣೆ ವಿರೋಧಿ ಕೇಂದ್ರದ ಪೊಲೀಸರು ಉಲ್ವೆ ಪ್ರದೇಶದ ಮನೆಯೊಂದರ ಮೇಲೆ ಸೋಮವಾರ ದಾಳಿ ನಡೆಸಿ, 412 ಗ್ರಾಂ ಕೊಕೇನ್‌ ಅನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಕೊಕೇನ್‌ ಅನ್ನು ಎಲ್ಲಿಂದ ತಂದಿದ್ದಾರೆ ಮತ್ತು ಯಾರಿಗೆ ಮಾರಾಟ ಮಾಡುತ್ತಿದ್ದರು ಎಂಬ ಕುರಿತು ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.