ADVERTISEMENT

ಶ್ರದ್ಧಾ ವಾಲಕರ್ ಕೊಲೆ ಪ್ರಕರಣ: ಜಾಮೀನಿಗಾಗಿ ದೆಹಲಿ ಕೋರ್ಟ್ ಮೆಟ್ಟಿಲೇರಿದ ಆರೋಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಡಿಸೆಂಬರ್ 2022, 9:07 IST
Last Updated 16 ಡಿಸೆಂಬರ್ 2022, 9:07 IST
ಅಫ್ತಾಬ್‌ ಅಮೀನ್‌ ಪೂನವಾಲಾ (ಪಿಟಿಐ ಚಿತ್ರ)
ಅಫ್ತಾಬ್‌ ಅಮೀನ್‌ ಪೂನವಾಲಾ (ಪಿಟಿಐ ಚಿತ್ರ)   

ನವದೆಹಲಿ:ಮುಂಬೈ ಮೂಲದ ಕಾಲ್‌ಸೆಂಟರ್‌ ಉದ್ಯೋಗಿ, ತನ್ನ ಸಹಜೀವನ ಸಂಗಾತಿ ಶ್ರದ್ಧಾ ವಾಲಕರ್‌ ಕೊಲೆ ಪ್ರಕರಣದ ಆರೋಪಿ ಅಫ್ತಾಬ್‌ ಅಮೀನ್‌ ಪೂನವಾಲಾ ಜಾಮೀನು ಕೋರಿ ದೆಹಲಿಯ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ.

ಸದ್ಯ ನ್ಯಾಯಾಂಗ ಬಂಧನದಲ್ಲಿರುವಅಫ್ತಾಬ್‌ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ನ್ಯಾಯಾಲಯವು ಡಿಸೆಂಬರ್ 17ರಂದು ಕೈಗೆತ್ತಿಕೊಳ್ಳಲಾಗಿದೆ.

ಅಫ್ತಾಬ್‌,ಶ್ರದ್ಧಾ ಅವರನ್ನು ದಕ್ಷಿಣ ದೆಹಲಿಯ ಮಹ್ರೌಲಿಯಲ್ಲಿರುವ ತನ್ನ ಫ್ಲ್ಯಾಟ್‌ನಲ್ಲಿ ಮೇತಿಂಗಳಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದ. ನಂತರಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, 300 ಲೀಟರ್ ಸಾಮರ್ಥ್ಯದ ಫ್ರಿಜ್‌ನಲ್ಲಿ ಸುಮಾರು ಮೂರು ವಾರಗಳವರೆಗೆ ಇರಿಸಿದ್ದ. ನಂತರ ಅವುಗಳನ್ನು ನಗರದ ವಿವಿಧೆಡೆ ಮತ್ತು ಛತರ್‌ಪುರ ಸಮೀಪದ ಅರಣ್ಯ ಪ್ರದೇಶದಲ್ಲಿ ಹಲವು ದಿನಗಳವರೆಗೆ ಒಂದೊಂದಾಗಿ ಬಿಸಾಡಿದ್ದ.

ADVERTISEMENT

'ಸಿಟ್ಟಿನ ಭರದಲ್ಲಿ ಅಪರಾಧ ಎಸಗಿದೆ' ಎಂದು ಪೂನಾವಾಲಾ ‌ಒಪ್ಪಿಕೊಂಡಿದ್ದಾನೆ.ಪೊಲೀಸ್‌ ತನಿಖೆಯಲ್ಲಿ ನೀಡಿರುವ ತಪ್ಪೊಪ್ಪಿಗೆ ಹೇಳಿಕೆಗಳು ಮಂಪರು ಪರೀಕ್ಷೆ ಮತ್ತು ಸುಳ್ಳುಪತ್ತೆ ಪರೀಕ್ಷೆ ಎರಡರಲ್ಲೂ ಒಂದೇ ರೀತಿ ಇದ್ದು, ಎರಡರ ಫಲಿತಾಂಶವೂ ತಾಳೆಯಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಹತ್ಯೆ ಪ್ರಕರಣ ಬೆಳಕಿಗೆ ಬಂದ ಬಳಿಕ ಮೊದಲ ಬಾರಿಗೆ (ಕಳೆದ ವಾರ) ಮಾಧ್ಯಮಗಳೊಂದಿಗೆ ಮಾತನಾಡಿದ್ದಶ್ರದ್ಧಾ ವಾಲಕರ್ ಅವರ ತಂದೆ ವಿಕಾಸ್ ವಾಲಕರ್,‘ನನ್ನ ಮಗಳು ಬರ್ಬರವಾಗಿ ಹತ್ಯೆಯಾದಳು. ವಾಸೈ ಪೊಲೀಸ್ ಠಾಣೆಯ ಪೊಲೀಸರಿಂದಾಗಿ ನಾನು ಹಲವು ಸಮಸ್ಯೆಗಳನ್ನು ಎದುರಿಸಿದ್ದೇನೆ. ಅವರು ನನಗೆ ಸಹಾಯ ಮಾಡಿದ್ದಿದ್ದರೆ ನನ್ನ ಮಗಳು ಜೀವಂತವಾಗಿರುತ್ತಿದ್ದಳು’ ಎಂದು ಹೇಳಿದ್ದರು.

‘ನನ್ನ ಮಗಳನ್ನು ಕೊಂದ ಆಫ್ತಾಬ್ಪೂನವಾಲಾನಿಗೆ ತಕ್ಕ ಪಾಠ ಕಲಿಸಬೇಕು. ಅವನನ್ನು ಗಲ್ಲಿಗೇರಿಸಬೇಕು. ಆಫ್ತಾಬ್ ಮನೆಯ ಸದಸ್ಯರು, ಸಂಬಂಧಿಕರು ಮತ್ತು ಈ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲರನ್ನೂ ತನಿಖೆಗೆ ಒಳಪಡಿಸಬೇಕು’ ಎಂದಿದ್ದರು.

'18 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳನ್ನು ಸ್ವಲ್ಪಮಟ್ಟಿಗೆ ನಿಯಂತ್ರಿಸಬೇಕು. ನನಗೆ ಬಂದಿರುವ ಪರಿಸ್ಥಿತಿ ಬೇರೆ ಯಾರಿಗೂ ಬರಬಾರದು’ ಎಂದು ನೊಂದುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.