ಚಂಡೀಗಢ: ಪಂಜಾಬ್‌ನ ಎಎಪಿ ಸರ್ಕಾರವು ವಿಶೇಷ ಅಧಿವೇಶನ ಕರೆದಿದ್ದು ಬಹುಮತ ಸಾಬೀತುಪಡಿಸಲಿದೆ.
‘ಜನರು ಇಟ್ಟಿರುವ ನಂಬಿಕೆಗೆ ಬೆಲೆ ಇಲ್ಲ. ಸೆಪ್ಟೆಂಬರ್ 22ರ ಗುರುವಾರ ಪಂಜಾಬ್ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲಾಗಿದೆ. ಅಂದು ನಾವು ವಿಶ್ವಾಸಮತ ಯಾಚಿಸುವ ಮೂಲಕ ಬಹುಮತ ಸಾಬೀತುಪಡಿಸಲಿದ್ದೇವೆ. ಕ್ರಾಂತಿಗೆ ಜಯವಾಗಲಿ’ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಟ್ವೀಟ್ ಮಾಡಿದ್ದಾರೆ.
ದೆಹಲಿಯ ಎಎಪಿ ಸರ್ಕಾರ ಸೆಪ್ಟೆಂಬರ್ 1ರಂದು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಿ ಬಹುಮತ ಸಾಬೀತುಪಡಿಸಿತ್ತು. ಬಳಿಕ ಮಾತನಾಡಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ‘ಬಿಜೆಪಿಯ ಆಪರೇಷನ್ ಕಮಲ ವಿಫಲವಾಗಿದೆ ಎಂಬುದನ್ನು ತೋರಿಸಲು ವಿಶ್ವಾಸಮತವನ್ನು ಸಾಬೀತು ಮಾಡಲು ಮುಂದಾದೆವು. ಬಿಜೆಪಿಯ ತಂತ್ರಗಾರಿಕೆಯನ್ನು ಸೋಲಿಸಿದ್ದೇವೆ ಎಂಬುದನ್ನು ಸಾಬೀತುಮಾಡಿದ್ದೇವೆ’ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.