ADVERTISEMENT

Ladakh Row | ಬಿಕ್ಕಟ್ಟು ತಿಳಿಗೊಳಿಸಲು ಗಮನ ಹರಿಸಬೇಕು: ಜೈಶಂಕರ್

ಪಿಟಿಐ
Published 16 ನವೆಂಬರ್ 2024, 15:59 IST
Last Updated 16 ನವೆಂಬರ್ 2024, 15:59 IST
<div class="paragraphs"><p>ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು&nbsp;‘ಎಚ್‌ಟಿ ನಾಯಕತ್ವ ಶೃಂಗ’ದಲ್ಲಿ ಮಾತನಾಡಿದರು. </p></div>

ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ‘ಎಚ್‌ಟಿ ನಾಯಕತ್ವ ಶೃಂಗ’ದಲ್ಲಿ ಮಾತನಾಡಿದರು.

   

–ಪಿಟಿಐ ಚಿತ್ರ

ನವದೆಹಲಿ: ಚೀನಾ ಜೊತೆಗಿನ ‘ಸಮಸ್ಯೆ’ಯ ಭಾಗವಾಗಿದ್ದ, ಪೂರ್ವ ಲಡಾಖ್‌ನ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿದ್ದ (ಎಲ್‌ಎಸಿ) ಸೇನಾಪಡೆಗಳ ವಾಪಸಾತಿಯ ‍ಪ್ರಶ್ನೆ ಬಗೆಹರಿದಿದೆ. ಈಗ ಬಿಕ್ಕಟ್ಟನ್ನು ತಿಳಿಗೊಳಿಸುವ ಕಡೆ ಗಮನ ಹರಿಸಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದರು.

ADVERTISEMENT

ಸೇನಾ ಪಡೆಗಳ ವಾಪಸಾತಿ ನಂತರ ಭಾರತ ಮತ್ತು ಚೀನಾ ನಡುವಿನ ಸಂಬಂಧದಲ್ಲಿ ಒಂದಿಷ್ಟು ಸುಧಾರಣೆಗಳು ಆಗುತ್ತವೆ ಎಂಬ ನಿರೀಕ್ಷೆ ಹೊಂದುವುದು ಸಕಾರಣದ್ದಾಗಿದೆ ಎಂದು ಹೇಳಿದ ಜೈಶಂಕರ್, ಸಂಬಂಧದಲ್ಲಿ ಹೊಸ ಶಕೆ ಶುರುವಾಗಬಹುದು ಎಂಬ ಮಾತು ಆಡಲಿಲ್ಲ.

‘ನಾನು ಸೇನಾ ಪಡೆಗಳ ವಾಪಸಾತಿಯನ್ನು, ವಾಪಸಾತಿ ಎಂದಷ್ಟೇ ಗ್ರಹಿಸುತ್ತೇನೆ’ ಎಂದು ಅವರು ‘ಎಚ್‌ಟಿ ನಾಯಕತ್ವ ಶೃಂಗ’ದಲ್ಲಿ ಹೇಳಿದರು. ಎರಡೂ ದೇಶಗಳ ಸೈನಿಕರ ವಾಪಸಾತಿಯು, ದೇಶಗಳ ನಡುವಿನ ಸಂಬಂಧದಲ್ಲಿ ಹೊಸ ಆರಂಭವೊಂದನ್ನು ಹೇಳುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರವಾಗಿ ಜೈಶಂಕರ್ ಹೀಗೆ ಹೇಳಿದರು.

ಭಾರತ ಮತ್ತು ಚೀನಾ ನಡುವಿನ ಸಂಬಂಧದ ವಿಚಾರವಾಗಿ ಹಲವು ಅಂಶಗಳನ್ನು ಪ್ರಸ್ತಾಪಿಸಿದ ಜೈಶಂಕರ್, ಈ ಸಂಬಂಧವು ಬಹಳ ಸಂಕೀರ್ಣವಾಗಿದೆ ಎಂದು ತಿಳಿಸಿದರು. 

ರಷ್ಯಾ–ಉಕ್ರೇನ್ ಯುದ್ಧ ಹಾಗೂ ಅದಕ್ಕೆ ಶಾಂತಿಯುತವಾದ ಪರಿಹಾರ ಕಂಡುಕೊಳ್ಳಲು ಭಾರತವು ನಡೆಸಿರುವ ಯತ್ನಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರವಾಗಿ ಜೈಶಂಕರ್ ಅವರು, ಪರಿಹಾರವು ಯುದ್ಧಭೂಮಿಯಲ್ಲಿ ಸಿಗುವುದಿಲ್ಲ ಎಂದರು.

‘ಸದಾಶಯದೊಂದಿಗೆ ಮಾತುಕತೆಗಳನ್ನು ನಡೆಸಲು ನಾವು ಯತ್ನ ನಡೆಸುತ್ತಿದ್ದೇವೆ... ನಾವು ಶಾಂತಿ ಸೂತ್ರವನ್ನು ಇಬ್ಬರ ಮುಂದೆ ಇರಿಸಿಲ್ಲ. ಅದನ್ನು ಮಾಡುವುದು ನಮ್ಮ ಕೆಲಸ ಎಂದು ಭಾವಿಸಿಲ್ಲ. ಎರಡೂ ದೇಶಗಳು ಪರಸ್ಪರ ಮಾತುಕತೆ ನಡೆಸಲು ಸಾಧ್ಯವಾಗುವಂತೆ ಒಂದೆಡೆ ತರಲು ಮಾರ್ಗವೊಂದನ್ನು ಕಂಡುಕೊಳ್ಳುವುದು ನಮ್ಮ ಕೆಲಸ. ಏನೇ ಇದ್ದರೂ, ಕೊನೆಯಲ್ಲಿ ಎರಡೂ ದೇಶಗಳು ಒಟ್ಟಿಗೆ ಕುಳಿತು ಮಾತುಕತೆ ನಡೆಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.