ಭುವನೇಶ್ವರ:ಒಡಿಶಾ ರಾಜ್ಯದ ಪುರಿ ಕಡಲತೀರಕ್ಕೆ ಫೋನಿ ಚಂಡಮಾರುತ ಅಪ್ಪಳಿಸಿ ಒಂದು ತಿಂಗಳಾಯಿತು. ಚಂಡಮಾರುತದ ಹೊಡೆತಕ್ಕೆ ಹಾಳಾಗಿದ್ದ ವಿದ್ಯುತ್ ಪೂರೈಕೆ ವ್ಯವಸ್ಥೆ ಈವರೆಗೆ ಸರಿಯಾಗಿಲ್ಲ. ಹೀಗಾಗಿ ಒಡಿಶಾದ ಸುಮಾರು ಐದು ಲಕ್ಷ ಮಂದಿ ವಿದ್ಯುತ್ ಸಂಪರ್ಕ ಇಲ್ಲದೆ ಬಿರು ಬೇಸಿಗೆಯ ದಿನಗಳನ್ನು ಕಳೆಯುತ್ತಿದ್ದಾರೆ.
'ಫೋನಿ'ಯ ಅವಾಂತರದಿಂದ ಅತಿ ಹೆಚ್ಚು ನಷ್ಟ ಅನುಭವಿಸಿದ್ದು ಪುರಿ ಜಿಲ್ಲೆ. ಚಂಡಮಾರುತದ ಹೊಡೆತಕ್ಕೆ ಸುಮಾರು 3 ಲಕ್ಷ ಮನೆಗಳ ವಿದ್ಯುತ್ ಸಂಪರ್ಕ ಹಾಳಾಗಿತ್ತು. ಈವರೆಗೆ 1.50 ಲಕ್ಷ ಮನೆಗಳಿಗಷ್ಟೇ ವಿದ್ಯುತ್ ಸಂಪರ್ಕ ಒದಗಿಸಲು ಸರ್ಕಾರಕ್ಕೆ ಸಾಧ್ಯವಾಗಿದೆ.
ಜಿಲ್ಲೆಯ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಮರು ಸ್ಥಾಪಿಸಲು ಈವರೆಗೆ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಒಡಿಶಾದ ಒಟ್ಟು 25 ಲಕ್ಷ ಮನೆಗಳು ಚಂಡಮಾರುತದ ನಂತರ ವಿದ್ಯುತ್ ಸಂಪರ್ಕ ಕಡಿದುಕೊಂಡಿದ್ದವು. ಸುಮಾರು 23 ಲಕ್ಷ ಮನೆಗಳಿಗೆ ಮತ್ತೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.