ಚಂಡೀಗಢ: ಗಾಲ್ವನ್ ಕಣಿವೆ ಸಂಘರ್ಷದ ಬಳಿಕ ನಗರದಲ್ಲಿ ಚೀನಾ ಉತ್ಪನ್ನಗಳ ಮಾರಾಟ ಕುಸಿದಿದೆ ಎಂದು ವರದಿಯಾಗಿದೆ.
ಇಲ್ಲಿನ ಸೆಕ್ಟರ್ 15ರಲ್ಲಿರುವಪಟೇಲ್ ಮಾರುಕ್ಟಟೆಯ ಮಳಿಗೆಯೊಂದರ ಮಾಲೀಕ, ‘ಇಲ್ಲಿಗೆ ಬರುವ ಕೆಲವು ಗ್ರಾಹಕರುತಾವು ಕೊಂಡುಕೊಳ್ಳಲು ಬಯಸುವ ವಸ್ತು ಚೀನಾ ಉತ್ಪನ್ನವಲ್ಲ ಎಂಬುದು ಖಚಿತವಾದ ನಂತರವೇ ಖರೀದಿಸುತ್ತಾರೆ. ಜನರು ಚೀನಾದ ಪದಾರ್ಥಗಳನ್ನು ಖರೀದಿಸುತ್ತಿಲ್ಲ. ಸದ್ಯ ಇರುವಸರಕು ಖಾಲಿಯಾದ ನಂತರ, ಮುಂದೆ ಚೀನಾ ಉತ್ಪನ್ನಗಳನ್ನು ಮಾರಾಟ ಮಾಡದಿರಲು ನಿರ್ಧರಿಸಿದ್ದೇವೆ’ ಎಂದು ತಿಳಿಸಿದ್ದಾರೆ.
ಮುಂದುವರಿದು, ‘ಲಾಕ್‌ಡೌನ್‌ನಿಂದಾಗಿ ಈಗಾಗಲೇ ಮಾರಾಟ ಕುಸಿದಿದೆ. ಇದೀಗ ಈ ಪ್ರಕರಣದ(ಗಾಲ್ವನ್ ಕಣಿವೆ ಸಂಘರ್ಷ) ನಂತರ ಚೀನಾ ಉತ್ಪನ್ನಗಳ ಮಾರಾಟದಲ್ಲಿ ಮತ್ತಷ್ಟು ಕುಸಿತ ಕಂಡುಬಂದಿದೆ’ ಎಂದು ಹೇಳಿದ್ದಾರೆ.
ಚಪ್ಪಲಿ ಅಂಗಡಿ ಮಾಲೀಕರೊಬ್ಬರು, ‘ಚೀನಾ ಉತ್ಪನ್ನಗಳನ್ನು ತಾವು ಖರೀಸುವುದಿಲ್ಲ ಎಂದು ಗ್ರಾಹಕರು ನೇರವಾಗಿಯೇ ಹೇಳುತ್ತಾರೆ’ ಎಂದಿದ್ದಾರೆ.
ಪೂರ್ವ ಲಡಾಖ್‌ನ ಗಾಲ್ವನ್ ಕಣಿವೆ ಪ್ರದೇಶದಲ್ಲಿ ಜೂನ್ 15ರ ರಾತ್ರಿ ಭಾರತ ಹಾಗೂ ಚೀನಾ ಸೇನೆಗಳ ನಡುವೆ ಹಿಂಸಾತ್ಮಕ ಸಂಘರ್ಷ ನಡೆದಿತ್ತು. ಈ ವೇಳೆ ದೇಶದ 20 ಯೋಧರು ಹುತಾತ್ಮರಾಗಿದ್ದರು.ಸಂಘರ್ಷದ ಸಂದರ್ಭ ಚೀನಾ ಕಡೆಯಲ್ಲಿ ಸುಮಾರು 43 ಸಾವು–ನೋವು ಸಂಭವಿಸಿದೆ ಎಂದು ವರದಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.