ADVERTISEMENT

ವಿಡಿಯೊ | ರಾಹುಲ್ ನಂತರ ಈಗ ಕಾಂಗ್ರೆಸ್‌ ಕಾರ್ಯಕರ್ತರ ‘ಪಾರ್ಟಿ’: ಬಿಜೆಪಿ ಟೀಕೆ

​ಪ್ರಜಾವಾಣಿ ವಾರ್ತೆ
Published 12 ಮೇ 2022, 7:01 IST
Last Updated 12 ಮೇ 2022, 7:01 IST
ಪಾರ್ಟಿ ದೃಶ್ಯ
ಪಾರ್ಟಿ ದೃಶ್ಯ   

ಮುಂಬೈ:ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ನೈಟ್‌ ಕ್ಲಬ್‌ನಲ್ಲಿ ಕಾಣಿಸಿಕೊಂಡಿದ್ದ ವಿಡಿಯೊ ವೈರಲ್‌ ಆದಬಳಿಕ, ಇದೀಗ ಕಾಂಗ್ರೆಸ್‌ ಕಾರ್ಯಕರ್ತರು ಕ್ಲಬ್‌ವೊಂದರಲ್ಲಿ ಡ್ಯಾನ್ಸ್‌, ‘ಪಾರ್ಟಿ‘ ಮಾಡುತ್ತಿದ್ದಾರೆ ಎಂದು ಹೇಳಿರುವ ಬಿಜೆಪಿ ವಿಡಿಯೊವನ್ನು ಬಿಡುಗಡೆ ಮಾಡಿದೆ.

ರಾಹುಲ್ ಗಾಂಧಿ ಅವರು ಕಠ್ಮಂಡುವಿನ ನೈಟ್‌ ಕ್ಲಬ್‌ವೊಂದರಲ್ಲಿ ಯುವತಿಯ ಜೊತೆ ಕಾಣಿಸಿಕೊಂಡಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಈ ವಿಡಿಯೊ ಕುರಿತಾಗಿ ಬಿಜೆಪಿ ರಾಹುಲ್‌ ಗಾಂಧಿಯನ್ನು ಕಟುವಾಗಿ ಟೀಕೆ ಮಾಡಿತ್ತು. ಈ ಬೆನ್ನಲ್ಲೇ ಕಾಂಗ್ರೆಸ್‌ ಕಾರ್ಯಕರ್ತರು ಕ್ಲಬ್‌ನಲ್ಲಿ ‘ಪಾರ್ಟಿ‘ ಮಾಡುತ್ತಿದ್ದಾರೆ ಎಂದು ಹೇಳಿರುವ ಬಿಜೆಪಿ ವಿಡಿಯೊವನ್ನುಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.

ಮಹಾರಾಷ್ಟ್ರ ಬಿಜೆಪಿಯ ಯುವ ಮುಖಂಡ ಶೆಹಜಾದ್‌ ಪೂನಾವಾಲ ಅವರು ಈ ವಿಡಿಯೊವನ್ನು ಟ್ವೀಟ್‌ ಮಾಡಿದ್ದಾರೆ. ಈ ಘಟನೆ ನಾಗಪುರದಲ್ಲಿ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ತಮ್ಮ ಟ್ವೀಟ್‌ನಲ್ಲಿ ಕಾಂಗ್ರೆಸ್‌ನ ಮಹಾರಾಷ್ಟ್ರ ಯುವ ಘಟಕ ಈ ವಿಡಿಯೊವನ್ನು ನೋಡಬೇಕು ಹಾಗೂ ‘ರಾತ್ರಿ ಪಾರ್ಟಿ‘ಯ ಹಾಡನ್ನು ಕೇಳಬೇಕು ಎಂದು ಬರೆದುಕೊಂಡಿದ್ದಾರೆ.

‘ರಾಹುಲ್‌ ಗಾಂಧಿ ನೇಪಾಳ ಪಬ್‌ನಲ್ಲಿದ್ದರೆ, ಯುವ ಕಾರ್ಯಕರ್ತರು ಕ್ಯಾಂಪ್‌ನಲ್ಲಿ ‘ಪಾರ್ಟಿಯ ತರಬೇತಿ‘ ಪಡೆಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಪರ, ವಿರೋಧದ ಚರ್ಚೆಗಳು ನಡೆಯುತ್ತಿವೆ.

ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಪ್ರಯತ್ನ ವಿಫಲವಾಗಿರುವ ಬೆನ್ನಲ್ಲೇ, ಕಾಂಗ್ರೆಸ್ ನಾಯಕತ್ವ ಬಿಕ್ಕಟ್ಟಿನ ಚರ್ಚೆ ಮುನ್ನೆಲೆಗೆ ಬಂದಿದೆ. ಇದೇ ವೇಳೆ ಕಾಂಗ್ರೆಸ್‌ ಕಾರ್ಯಕರ್ತರ ನೈಟ್‌ ಕ್ಲಬ್‌ ವಿಡಿಯೊ ‍ಪ್ರಕಟವಾಗಿದೆ.

ಈ ವಿಡಿಯೊದ ಸತ್ಯಾಸತ್ಯತೆ ಕುರಿತಂತೆ ‘ಇಂಡಿಯಾ ಟುಡೆ‘ ಪರಿಶೀಲನೆನಡೆಸುತ್ತಿದೆ. ಇಲ್ಲಿಯವರೆಗೂ ಈ ವಿಡಿಯೊದ ನಿಖರತೆ ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ಅದು ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.