ADVERTISEMENT

ದೆಹಲಿ ವಿಧಾನಸಭೆಯಲ್ಲಿ ಸುರಂಗ ಪತ್ತೆಯಾದ ಬೆನ್ನಿಗೆ ಈಗ ಕೊಠಡಿಯೊಂದು ಪತ್ತೆ! ಏನದು?

ಐಎಎನ್ಎಸ್
Published 13 ಡಿಸೆಂಬರ್ 2021, 16:32 IST
Last Updated 13 ಡಿಸೆಂಬರ್ 2021, 16:32 IST
ದೆಹಲಿ ವಿಧಾನಸಭೆ
ದೆಹಲಿ ವಿಧಾನಸಭೆ    

ನವದೆಹಲಿ: ದೆಹಲಿ ವಿಧಾನಸಭೆಯಿಂದ (ಹಳೆಯ ಸೆಕ್ರೆಟರಿಯೇಟ್) ನಿಂದ ಕೆಂಪು ಕೋಟೆಗೆ ಸಂಪರ್ಕ ಕಲ್ಪಿಸುವ ಸುರಂಗ ಮಾರ್ಗವೊಂದು ಕೆಲ ತಿಂಗಳ ಹಿಂದಷ್ಟೇ ಪತ್ತೆಯಾಗಿತ್ತು. ಈಗ ಅದೇ ದೆಹಲಿ ವಿಧಾನಸಭೆಯ ಆವರಣದಲ್ಲಿ ಕೈದಿಗಳನ್ನು ನೇಣಿಗೇರಿಸುತ್ತಿದ್ದ ಕೊಠಡಿಯೊಂದುಪತ್ತೆಯಾಗಿದೆ.

ವಿಧಾನಸಭೆ ಆವರಣದಲ್ಲಿ ಇತ್ತೀಚೆಗೆ ಟೊಳ್ಳಾದ ಗೋಡೆಯೊಂದನ್ನು ಕೆಡವಲಾಗಿತ್ತು. ಆಗ ಈ ಕೊಠಡಿಪತ್ತೆಯಾಗಿದೆ ದೆಹಲಿ ವಿಧಾನಸಭೆ ಸ್ಪೀಕರ್ ರಾಮ್ ನಿವಾಸ್ ಗೋಯಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಪುರಾತತ್ವ ಇಲಾಖೆಗೂ ಶೀಘ್ರವೇ ಮಾಹಿತಿ ನೀಡಲಾಗುವುದು ಎಂದು ಅವರು ಹೇಳಿದರು.

ADVERTISEMENT

ಸೆಪ್ಟೆಂಬರ್‌ನಲ್ಲಿ ದೆಹಲಿ ವಿಧಾನಸಭೆಯಲ್ಲಿ ಸುರಂಗ ಪತ್ತೆಯಾಗಿತ್ತು. ಬ್ರಿಟಿಷರು ಮರಣದಂಡನೆ ಶಿಕ್ಷೆಗೆ ಒಳಗಾದ ಅಪರಾಧಿಗಳನ್ನು ಕರೆದೊಯ್ಯಲು ಇದನ್ನು ಬಳಸಿರಬಹುದು ಎಂದು ಗೋಯೆಲ್ ಆಗ ಮಾಧ್ಯಮಗಳಿಗೆ ಹೇಳಿದ್ದರು. ಅಲ್ಲದೇ, ಅಪರಾಧಿಗಳನ್ನು ನೇಣಿಗೇರಿಸುವ ಕೊಠಡಿಯೂಪತ್ತೆಯಾಗುವ ಸಾಧ್ಯತೆಗಳಿವೆ ಎಂದೂ ಆಗಲೇ ಹೇಳಿದ್ದರು.

ಆದರೆ, ಈ ಬಗ್ಗೆ ಪುರಾತತ್ವ ಇಲಾಖೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಒಳಚರಂಡಿ ಕಾಮಗಾರಿ ಮತ್ತು ದೆಹಲಿ ಮೆಟ್ರೋ ನಿರ್ಮಾಣದಿಂದಾಗಿ ಸುರಂಗ ಕೂಡ ನಾಶವಾಗಿದೆ.

ದೇಶದ ರಾಜಧಾನಿಯನ್ನು ದೆಹಲಿಗೆ ವರ್ಗಾಯಿಸಿದ ನಂತರದ ವರ್ಷದಲ್ಲಿ ಬ್ರಿಟಿಷರು 1912ರಲ್ಲಿ ಈ ಕಟ್ಟಡ ನಿರ್ಮಾಣ ಮಾಡಿದ್ದರು. ಜನವರಿ 18, 1927 ರಂದು ನವ ದೆಹಲಿಯಲ್ಲಿ ಹೊಸದಾಗಿ ನಿರ್ಮಿಸಲಾದ ಭಾರತದ ಸಂಸತ್ತಿನ ಭವನವನ್ನು ಉದ್ಘಾಟಿಸುವವರೆಗೆ ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್ ಮತ್ತು ಕೇಂದ್ರ ಶಾಸನ ಸಭೆಯನ್ನು (1919 ರ ನಂತರ) ನಡೆಸಲು ಈ ಕಟ್ಟಡ ಬಳಸಲಾಗುತ್ತಿತ್ತು. ಇದನ್ನು ಇ ಮಾಂಟೇಜ್‌ ಥಾಮಸ್ ವಿನ್ಯಾಸಗೊಳಿಸಿದ್ದರು.

ನಂತರ ಇದನ್ನು ನ್ಯಾಯಾಲಯವಾಗಿ ಪರಿವರ್ತಿಸಲಾಗಿತ್ತು. ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿಗಳನ್ನು ಇಲ್ಲಿಗೆ ಸುರಂಗ ಮಾರ್ಗದ ಮೂಲಕ ಕರೆತರಲಾಗುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.