ADVERTISEMENT

ರಾಜಸ್ಥಾನ | ಅಗ್ನಿಶಾಮಕ ಸಿಲಿಂಡರ್‌ ಸ್ಫೋಟಗೊಂಡು ಅಗ್ನವೀರ ಸಾವು

ಪಿಟಿಐ
Published 5 ಅಕ್ಟೋಬರ್ 2024, 16:10 IST
Last Updated 5 ಅಕ್ಟೋಬರ್ 2024, 16:10 IST
<div class="paragraphs"><p>(ಪ್ರಾತಿನಿಧಿಕ ಚಿತ್ರ)</p></div>
   

(ಪ್ರಾತಿನಿಧಿಕ ಚಿತ್ರ)

ಜೈಪುರ: ರಾಜಸ್ಥಾನದ ಭರತಪುರದಲ್ಲಿ ಶನಿವಾರ ನಡೆದ ಸೇನಾ ಅಣಕು ಕಾರ್ಯಾಚರಣೆ ಸಂದರ್ಭದಲ್ಲಿ ಬೆಂಕಿ ನಂದಿಸಲು ಬಳಸುವ ಅಧಿಕ ಒತ್ತಡದ ಸಿಲಿಂಡರ್‌ ಸ್ಫೋಟಗೊಂಡ ಪರಿಣಾಮ 24 ವರ್ಷದ ಅಗ್ನಿವೀರ ಒಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಅಗ್ನಿವೀರರನ್ನು ಸೌರಭ್ ಪಾಲ್ ಎಂದು ಗುರುತಿಸಲಾಗಿದೆ. ಗೋಲ್ಪುರ ಸೇನಾ ವಲಯದಲ್ಲಿ ಈ ತರಬೇತಿ ಕಾರ್ಯಾಗಾರ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಅಗ್ನಿಶಾಮಕ ಸಿಲಿಂಡರ್ ಸ್ಫೋಟಗೊಂಡು ಸೌರಭ್ ತೀವ್ರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಡಿಎಸ್‌ಪಿ ಅನಿಲ್ ಜಸೋರಿಯಾ ತಿಳಿಸಿದ್ದಾರೆ.

ADVERTISEMENT

ಸೌರಭ್‌ ಅವರು ಉತ್ತರ ಪ್ರದೇಶದ ಭಾಖರಾ ಗ್ರಾಮದವರಾಗಿದ್ದಾರೆ. 2023ರಲ್ಲಿ ಇವರು ಅಗ್ನಿವೀರ ಯೋಜನೆಯಡಿ ಸೇನೆ ಸೇರಿದ್ದರು. ಘಟನೆಯ ಮಾಹಿತಿಯನ್ನು ಸೌರಭ್ ಅವರ ಕುಟುಂಬಕ್ಕೆ ನೀಡಲಾಗಿದೆ. ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.