ADVERTISEMENT

‘ಅಗ್ನಿವೀರ’ ಅತ್ಯುತ್ತಮ ಅವಕಾಶ: ನೌಕಾಪಡೆ ಮುಖ್ಯಸ್ಥ

ಪಿಟಿಐ
Published 10 ಆಗಸ್ಟ್ 2024, 15:47 IST
Last Updated 10 ಆಗಸ್ಟ್ 2024, 15:47 IST
ದಿನೇಶ್‌ ಕುಮಾರ್‌ ತ್ರಿಪಾಠಿ
ದಿನೇಶ್‌ ಕುಮಾರ್‌ ತ್ರಿಪಾಠಿ   

ಭುವನೇಶ್ವರ: ದೇಶ ಸೇವೆ ಸಲ್ಲಿಸಲು ಯುವಕರಿಗೆ ‘ಅಗ್ನಿವೀರ’ ಯೋಜನೆಯು ಅತ್ಯುತ್ತಮ ಅವಕಾಶವಾಗಿದೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ದಿನೇಶ್‌ ಕುಮಾರ್‌ ತ್ರಿಪಾಠಿ ಅವರು ಹೇಳಿದರು.

ಒಡಿಶಾದ ಖುರ್ದಾ ಜಿಲ್ಲೆಯ ಐಎನ್‌ಎಸ್‌ ಚಿಲಿಕಾದಲ್ಲಿ ಶುಕ್ರವಾರ ತರಬೇತಿ ಪಡೆದ ಅಗ್ನಿವೀರರ ನಿರ್ಗಮನ ಪಥಸಂಚಲನದಲ್ಲಿ ತ್ರಿಪಾಠಿ ಅವರು ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು, ‘16 ವಾರಗಳ ತರಬೇತಿ ಪೂರೈಸಿದ 214 ಮಹಿಳಾ ಅಗ್ನಿವೀರರು ಸೇರಿ ಒಟ್ಟು 1,389 ಅಗ್ನಿವೀರರು ಶುಕ್ರವಾರ ನೌಕಾಪಡೆಗೆ ಸೇರ್ಪಡೆಯಾಗಿದ್ದಾರೆ. ಈ ಯೋಜನೆಯು ಯುವಜನರಿಗೆ ದೇಶಸೇವೆ ಮಾಡಲು ನಾಲ್ಕು ವರ್ಷಗಳ ಅವಕಾಶವನ್ನು ನೀಡುತ್ತದೆ‘ ಎಂದರು.

ಅಗ್ನಿವೀರ ಯೋಜನೆ ಸುತ್ತ ಹುಟ್ಟಿರುವ ವಿವಾದದ ಕುರಿತು ಕೇಳಿದ ಪ್ರಶ್ನೆಗೆ, ‘ಅಂಥ ಯಾವುದೇ ವಿವಾದ ಇಲ್ಲ’ ಎಂದಷ್ಟೇ ಉತ್ತರಿಸಿದರು. ಬಾಂಗ್ಲಾದೇಶದ ಬಿಕ್ಕಟ್ಟಿನ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.