ADVERTISEMENT

ಕೋಲ್ಕತ್ತ ಮೇಯರ್, DYFI ನಾಯಕಿ ನಡುವೆ ವಿವಾದದ ಕಿಡಿ ಹಚ್ಚಿದ AI ಚಿತ್ರ

ಪಿಟಿಐ
Published 27 ಅಕ್ಟೋಬರ್ 2024, 4:17 IST
Last Updated 27 ಅಕ್ಟೋಬರ್ 2024, 4:17 IST
<div class="paragraphs"><p>ಫಿರ್ಹಾದ್ ಹಕೀಮ್</p></div>

ಫಿರ್ಹಾದ್ ಹಕೀಮ್

   

ಕೋಲ್ಕತ್ತ: ತೃಣಮೂಲ ಕಾಂಗ್ರೆಸ್‌ ನಾಯಕ ಮತ್ತು ಕೋಲ್ಕತ್ತ ಮೇಯರ್ ಫಿರ್ಹಾದ್ ಹಕೀಮ್ ಅವರನ್ನೇ ಹೋಲುವ ವಿವಾದಿತ ಎಐ ಚಿತ್ರವೊಂದು ಡಿವೈಎಫ್‌ಐ ನಾಯಕಿ ಮೀನಾಕ್ಷಿ ಮುಖರ್ಜಿ ಅವರಿಗೆ ಸೇರಿದ ಎನ್ನಲಾದ ಸಾಮಾಜಿಕ ಮಾಧ್ಯಮದ ಪುಟದಲ್ಲಿ ಕಾಣಿಸಿಕೊಂಡಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.

ಗಡ್ಡ, ಮದ್ಯದ ಬಾಟಲಿ ಹಿಡಿದುಕೊಂಡಿರುವಂತೆ ಹಕೀಮ್‌ ಅವರನ್ನು ಎಐ ತಂತ್ರಜ್ಞಾನ ಬಳಸಿ ಚಿತ್ರಿಸಲಾಗಿದೆ. ಚಿತ್ರದ ಹಿನ್ನೆಲೆಯಲ್ಲಿ ಮಸೀದಿ ಇರುವುದು ಕಾಣಬಹುದು.

ADVERTISEMENT

ಎಐ ಚಿತ್ರದ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಲೇ, ಇದು ನನ್ನ ಪ್ರೊಫೈಲ್‌ನಿಂದ ಹಂಚಿಕೆಯಾಗಿಲ್ಲ ಎಂದು ಮುಖರ್ಜಿ ಹೇಳಿದ್ದಾರೆ. ಅಲ್ಲದೇ ಈ ಬಗ್ಗೆ ಕೋಲ್ಕತ್ತ ಪೊಲೀಸರ ಸೈಬರ್ ವಿಭಾಗಕ್ಕೆ ದೂರು ಸಲ್ಲಿಸಿದ್ದಾರೆ.

‘ನಾನು ಅದನ್ನು ಪೋಸ್ಟ್ ಮಾಡಿದ್ದೇನೆ ಎಂದು ಟಿಎಂಸಿಯಿಂದ ಸಾಬೀತುಪಡಿಸಲು ಸಾಧ್ಯವೇ’ ಎಂದು ಮುಖರ್ಜಿ ಪ್ರಶ್ನಿಸಿದ್ದಾರೆ.

‘ಇದು ಪಶ್ಚಿಮ ಬಂಗಾಳದಲ್ಲಿ ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುವ ತಂತ್ರದ ಭಾಗವಾಗಿದೆ. ಪೋಸ್ಟ್ ತನ್ನ ಪ್ರೊಫೈಲ್‌ನಿಂದ ಮಾಡಿಲ್ಲವೆಂದಾದರೆ ಅವರು(ಮುಖರ್ಜಿ) ಪೊಲೀಸರಿಗೆ ದೂರು ನೀಡಲಿ’ ಎಂದು ಹಕೀಮ್‌ ಅಸಮಾಧಾನ ಹೊರಹಾಕಿದ್ದಾರೆ.

ಪ್ರಕರಣ ಸಂಬಂಧ ಮುಖರ್ಜಿ ವಿರುದ್ಧ ಚೆಟ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕೋಮು ಉದ್ವಿಗ್ನತೆಯನ್ನು ಪ್ರಚೋದಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿಲಾಗಿದೆ.

ಈ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಕೋಲ್ಕತ್ತ ಪೊಲೀಸ್ ಆಯುಕ್ತ ಮನೋಜ್ ವರ್ಮಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.