ADVERTISEMENT

Bangla Unrest: ಢಾಕಾಕ್ಕೆ ವಿಮಾನ ಸೇವೆ ಆರಂಭಿಸಿದ ಏರ್‌ ಇಂಡಿಯಾ

ಪಿಟಿಐ
Published 6 ಆಗಸ್ಟ್ 2024, 23:30 IST
Last Updated 6 ಆಗಸ್ಟ್ 2024, 23:30 IST
<div class="paragraphs"><p>ಏರ್‌ ಇಂಡಿಯಾ ವಿಮಾನ </p></div>

ಏರ್‌ ಇಂಡಿಯಾ ವಿಮಾನ

   

ಸಾಂದರ್ಭಿಕ ಚಿತ್ರ

ನವದೆಹಲಿ: ಏರ್ ಇಂಡಿಯಾ ಮಂಗಳವಾರ ಸಂಜೆಯಿಂದಲೇ ರಾಷ್ಟ್ರ ರಾಜಧಾನಿಯಿಂದ ಢಾಕಾಕ್ಕೆ ತನ್ನ ನಿಗದಿತ ವಿಮಾನಯಾನವನ್ನು ಪುನರಾರಂಭಿಸಿತು. ವಿಸ್ತಾರಾ ಕೂಡ ತನ್ನ ನಿಗದಿತ ವಿಮಾನ ಸೇವೆಗಳನ್ನು ಬುಧವಾರ (ಆ.7) ಪುನರಾರಂಭಿಸಲಿದೆ.

ADVERTISEMENT

ಬಾಂಗ್ಲಾದೇಶದಲ್ಲಿ ಅನಿಶ್ಚಿತ ಪರಿಸ್ಥಿತಿ ಇರುವುದರಿಂದ ವಿಸ್ತಾರಾ ಮತ್ತು ಇಂಡಿಗೋ ಎರಡೂ ಮಂಗಳವಾರ ಬಾಂಗ್ಲಾದೇಶದ ರಾಜಧಾನಿಗೆ ತಮ್ಮ ವಿಮಾನಗಳನ್ನು ರದ್ದುಗೊಳಿಸಿದ್ದವು. ಏರ್‌ ಇಂಡಿಯಾ ಕೂಡ ಮಂಗಳವಾರ ಬೆಳಗಿನ ವಿಮಾನಗಳ ಸಂಚಾರ ರದ್ದುಪಡಿಸಿತ್ತು. ಆದರೆ, ದೆಹಲಿಯಿಂದ ಢಾಕಾಕ್ಕೆ ಎಐ237/238 ಸಂಖ್ಯೆಯ ವಿಮಾನದ ಸೇವೆಯನ್ನು ಒದಗಿಸುವ ಮೂಲಕ ಸಂಜೆ ವೇಳೆಗೆ ಏರ್‌ ಇಂಡಿಯಾ ಸಂಚಾರ ಪುನರಾರಂಭಿಸಿತು. 

ಅಲ್ಲಿನ ಸದ್ಯದ ಪರಿಸ್ಥಿತಿಯಿಂದಾಗಿ, ಆಗಸ್ಟ್ 4 ಮತ್ತು 7ರ ನಡುವೆ ಢಾಕಾಗೆ ಮತ್ತು ಅಲ್ಲಿಂದ ಭಾರತಕ್ಕೆ ಬರುವ ಯಾವುದೇ ವಿಮಾನಗಳಿಗೆ ಟಿಕೆಟ್‌ ಬುಕ್‌ ಮಾಡಿದ್ದ  ಪ್ರಯಾಣಿಕರಿಗೆ ಪ್ರಯಾಣ ಮರುಹೊಂದಿಸುವಿಕೆಗೆ ಒಂದು ಬಾರಿಯ ವಿನಾಯಿತಿ ನೀಡಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಅದರಲ್ಲೂ ಆ.5ರಂದು ಅಥವಾ ಅದಕ್ಕೂ ಮೊದಲು ಬುಕ್ ಮಾಡಿದ್ದ ಟಿಕೆಟ್‌ಗಳಿಗೆ ಈ ವಿನಾಯಿತಿ ಅನ್ವಯಿಸುತ್ತದೆ.

ಟಾಟಾ ಗ್ರೂಪ್-ಮಾಲೀಕತ್ವದ ವಿಮಾನಯಾನ ಸಂಸ್ಥೆಯು ರಾಷ್ಟ್ರ ರಾಜಧಾನಿಯಿಂದ ಢಾಕಾಕ್ಕೆ ನಿತ್ಯ ಎರಡು ವಿಮಾನಗಳ ಸೇವೆ ಕಲ್ಪಿಸುತ್ತಿದೆ. ಅಧಿಕಾರಿಯೊಬ್ಬರ ಪ್ರಕಾರ, ವಿಸ್ತಾರಾ ಬುಧವಾರದಿಂದ ವೇಳಾಪಟ್ಟಿಯ ಪ್ರಕಾರವೇ ಸೇವೆಗಳನ್ನು ಪುನರಾರಂಭಿಸಲಿದೆ.

ವಿಸ್ತಾರಾ ಮುಂಬೈನಿಂದ ಢಾಕಾಕ್ಕೆ ನಿತ್ಯ ಒಂದು ವಿಮಾನ, ದೆಹಲಿಯಿಂದ ಢಾಕಾಕ್ಕೆ ವಾರದಲ್ಲಿ ಮೂರು ವಿಮಾನಗಳ ಸೇವೆ ಒದಗಿಸುತ್ತಿದೆ. 

ಇಂಡಿಗೋ ಬುಧವಾರ ಢಾಕಾಕ್ಕೆ ವಿಮಾನ ಸಂಚಾರ ಆರಂಭಿಸಬಹುದೆಂದು ನಿರೀಕ್ಷಿಸಲಾಗಿದೆ. ಸಾಮಾನ್ಯವಾಗಿ, ಇಂಡಿಗೋ ದೆಹಲಿ, ಮುಂಬೈ ಮತ್ತು ಚೆನ್ನೈನಿಂದ ಢಾಕಾಕ್ಕೆ ನಿತ್ಯ ಒಂದೊಂದು ವಿಮಾನವನ್ನು ಮತ್ತು ಕೋಲ್ಕತ್ತದಿಂದ ಢಾಕಾಕ್ಕೆ ದಿನಕ್ಕೆ ಎರಡು ವಿಮಾನಗಳ ಸೇವೆಗಳನ್ನು ನಿರ್ವಹಿಸುತ್ತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.