ADVERTISEMENT

ಒಡಿಶಾ: ಡ್ರೋನ್‌ ಮೂಲಕ ರಕ್ತ ರವಾನಿಸಿದ ಏಮ್ಸ್‌, ಇದು ದೇಶದಲ್ಲೇ ಮೊದಲ ಉಪಕ್ರಮ

ಪಿಟಿಐ
Published 27 ಜನವರಿ 2024, 13:39 IST
Last Updated 27 ಜನವರಿ 2024, 13:39 IST
ರಕ್ತದ ಚೀಲ ಹೊತ್ತೊಯ್ದ ಡ್ರೋನ್‌ –ಪಿಟಿಐ ಚಿತ್ರ
ರಕ್ತದ ಚೀಲ ಹೊತ್ತೊಯ್ದ ಡ್ರೋನ್‌ –ಪಿಟಿಐ ಚಿತ್ರ   

ಭುವನೇಶ್ವರ: ಒಡಿಶಾದ ಭುವನೇಶ್ವರದ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು (ಏಮ್ಸ್‌) ರಾಜ್ಯದ ಕೊರ್ಧಾ ಜಿಲ್ಲೆಯಲ್ಲಿಯ ತಂಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ರಕ್ತದ ಚೀಲವನ್ನು ಗುರುವಾರ ಡ್ರೋನ್‌ ಮೂಲಕ ರವಾನಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದು ಭುವನೇಶ್ವರದ ಏಮ್ಸ್‌ನ ‘ಡ್ರೋನ್‌ ಆರೋಗ್ಯ ಸೇವೆ’ಯ ಉದ್ಘಾಟನಾ ಹಾರಾಟವಾಗಿತ್ತು. ಮೊದಲ ಹಾರಾಟದಲ್ಲಿಯೇ 65 ಕಿಮೀ ದೂರದ ಆರೋಗ್ಯ ಕೇಂದ್ರಕ್ಕೆ ರಕ್ತ ರವಾನಿಸಲಾಗಿದೆ. ಕೇವಲ 35 ನಿಮಿಷದಲ್ಲಿ ರಕ್ತದ ಚೀಲವನ್ನು ತಲುಪಿಸಲಾಗಿದೆ. ಡ್ರೋನ್‌ ಬಳಸಿ ರಕ್ತ ರವಾನಿಸುತ್ತಿರುವುದು ದೇಶದಲ್ಲಿ ಇದೇ ಮೊದಲು ಎಂದು ಏಮ್ಸ್‌ನ ಪ್ರಕಟಣೆಯಲ್ಲಿ ಹೇಳಲಾಗಿದೆ.

ಸ್ಕೈ ಏರ್‌ ಮೊಬಿಲಿಟಿ ಎಂಬ ಸಂಸ್ಥೆ ಡ್ರೋನ್‌ ಸೇವೆಯನ್ನು ಭುವನೇಶ್ವರ ಏಮ್ಸ್‌ಗೆ ಒದಗಿಸುತ್ತಿದೆ. ರೋಗಿಯೊಬ್ಬರಿಗಾಗಿ ರಕ್ತ ರವಾನಿಸಲಾಗಿದೆ. ತಂತ್ರಜ್ಞಾನವನ್ನು ಆರೋಗ್ಯ ಸೇವಾ ವ್ಯವಸ್ಥೆ ಜೊತೆ ಸಂಜೋಯಿಸುವ ವಿಚಾರದಲ್ಲಿ ಈ ಉಪಕ್ರಮವು ಮಹತ್ವದ ಮೈಲಿಗಲ್ಲಾಗಿದೆ. ಆರೋಗ್ಯ ಕೇಂದ್ರದಿಂದ ಹಿಂದಿರುಗುವಾಗ ರಕ್ತದ ಮಾದರಿಗಳನ್ನು ಈ ಡ್ರೋನ್‌ ಹೊತ್ತುತಂದಿದೆ ಎಂದು ಭುವನೇಶ್ವರದ ಏಮ್ಸ್‌ನ ಕಾರ್ಯಕಾರಿ ನಿರ್ದೇಶಕ ಆಶುತೋಷ್‌ ಬಿಸ್ವಾಸ್‌ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.