ADVERTISEMENT

Video | ‘ಜೈ ಪ್ಯಾಲೆಸ್ಟೀನ್’, ‘ಅಲ್ಲಾಹು ಅಕ್ಬರ್’ ಹೆಸರಲ್ಲಿ ಓವೈಸಿ ಪ್ರಮಾಣವಚನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜೂನ್ 2024, 11:28 IST
Last Updated 25 ಜೂನ್ 2024, 11:28 IST
<div class="paragraphs"><p>ಅಸಾದುದ್ಧೀನ್‌ ಓವೈಸಿ</p></div>

ಅಸಾದುದ್ಧೀನ್‌ ಓವೈಸಿ

   

–ಎಕ್ಸ್‌ (ಟ್ವಿಟರ್) ಚಿತ್ರ

ನವದೆಹಲಿ: ಎಐಎಮ್ಐಎಮ್‌ನ ಅಧ್ಯಕ್ಷ, ಸಂಸದ ಅಸಾದುದ್ಧೀನ್‌ ಓವೈಸಿ ಅವರು 18ನೇ ಲೋಕಸಭೆಯ ಸದಸ್ಯರಾಗಿ ಇಂದು (ಮಂಗಳವಾರ) ಪ್ರಮಾಣವಚನ ಸ್ವೀಕರಿಸಿದ್ದಾರೆ.

ADVERTISEMENT

ಓವೈಸಿ ಅವರು ‘ಜೈ ಭೀಮ್, ಜೈ ಪ್ಯಾಲೆಸ್ಟೀನ್, ಜೈ ತೆಲಂಗಾಣ, ಅಲ್ಲಾಹು ಅಕ್ಬರ್’ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರಿಂದಾಗಿ ಸದನದಲ್ಲಿ ಕೆಲಕಾಲ ಗೊಂದಲದ ವಾತಾವರಣ ಉಂಟಾಗಿತ್ತು. ಕೆಲವು ಸಂಸದರು ಓವೈಸಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಬಾರಿ ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಐದನೇ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ಅಸಾದುದ್ಧೀನ್‌ ಓವೈಸಿ ಅವರು ಬಿಜೆಪಿಯ ಮಾಧವಿ ಲತಾ ವಿರುದ್ಧ ಗೆಲುವಿನ ನಗೆ ಬೀರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.