ADVERTISEMENT

ಸಾಫ್ಟ್‌ವೇರ್ ದೋಷ: ಏರ್ ಇಂಡಿಯಾದ 137 ವಿಮಾನಗಳ ಹಾರಾಟ ವಿಳಂಬ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2019, 8:53 IST
Last Updated 28 ಏಪ್ರಿಲ್ 2019, 8:53 IST
   

ನವದೆಹಲಿ: ಶನಿವಾರ ಬೆಳಗ್ಗೆ ಏರ್ ಇಂಡಿಯಾ ವಿಮಾನ ಸಂಸ್ಥೆಯ ಚೆಕ್ ಇನ್ ಸಾಫ್ಟ್‌ವೇರ್‌ನಲ್ಲಿ ದೋಷ ಕಾಣಿಸಿಕೊಂಡಿದ್ದು ಭಾನುವಾರವೂ ವಿಮಾನಗಳ ಹಾರಾಟ ವಿಳಂಬವಾಗಿದೆ.

ಭಾನುವಾರ 137 ವಿಮಾನಗಳ ಹಾರಾಟ ವಿಳಂಬವಾಗಿದ್ದು, ಸರಾಸರಿ 197 ನಿಮಿಷ ವಿಳಂಬವಾಗಿ ವಿಮಾನಗಳು ಹಾರಾಟ ನಡೆಸುತ್ತಿವೆ ಎಂದು ಏರ್ ಇಂಡಿಯಾದ ವಕ್ತಾರರು ಹೇಳಿದ್ದಾರೆ.

ಏರ್ ಇಂಡಿಯಾದ ಪಾಸೆಂಜರ್ ಸರ್ವೀಸ್ ಸಿಸ್ಟಂ ಸಾಫ್ಟ್‌ವೇರ್‌ನಲ್ಲಿ ದೋಷ ಕಾಣಿಸಿಕೊಂಡಿದ್ದು ಶನಿವಾರ ಮುಂಜಾನೆ3.30ರಿಂದ ಬೆಳಗ್ಗೆ 8.45ರವರೆಗೆ ಕಾರ್ಯ ನಿರ್ವಹಿಸಲಿಲ್ಲ.ಪ್ರಯಾಣಿಕರ ಚೆಕ್ ಇನ್, ಬ್ಯಾಗೇಜ್ ಮತ್ತು ಕಾಯ್ದಿರಿಸುವ ಕೆಲಸವನ್ನು ನಿರ್ವಹಿಸುವ ಕಾರ್ಯವನ್ನು ಪಾಸೆಂಜರ್ ಸರ್ವೀಸ್ ಸಿಸ್ಟಂ ಮಾಡುತ್ತದೆ.

ADVERTISEMENT

ಸಾಫ್ಟ್‌ವೇರ್ ದೋಷದಿಂದಾಗಿ ಶನಿವಾರ 149 ವಿಮಾನಗಳ ಹಾರಾಟ ವಿಳಂಬವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.