ADVERTISEMENT

ಢಾಕಾಕ್ಕೆ ಏರ್‌ ಇಂಡಿಯಾ ವಿಮಾನ ಸೇವೆ ರದ್ದು

ಪಿಟಿಐ
Published 5 ಆಗಸ್ಟ್ 2024, 16:22 IST
Last Updated 5 ಆಗಸ್ಟ್ 2024, 16:22 IST
ಏರ್‌ ಇಂಡಿಯಾ ವಿಮಾನ (ಸಾಂಧರ್ಭಿಕ ಚಿತ್ರ)
ಏರ್‌ ಇಂಡಿಯಾ ವಿಮಾನ (ಸಾಂಧರ್ಭಿಕ ಚಿತ್ರ)   

ನವದೆಹಲಿ: ಬಾಂಗ್ಲಾದೇಶದಲ್ಲಿ ಸದ್ಯ ಪರಿಸ್ಥಿತಿ ಹದಗೆಟ್ಟಿರುವುದರಿಂದ ಢಾಕಾಕ್ಕೆ ಸಂಚರಿಸುವ ಎಲ್ಲ ವಿಮಾನಗಳನ್ನು ಏರ್‌ ಇಂಡಿಯಾ ತಕ್ಷಣವೇ ಜಾರಿಗೆ ಬರುವಂತೆ ಸೋಮವಾರದಿಂದಲೇ ರದ್ದುಪಡಿಸಿದೆ.

ರಾಷ್ಟ್ರೀಯ ರಾಜಧಾನಿಯಿಂದ ಢಾಕಾಗೆ ನಿತ್ಯ ಏರ್‌ ಇಂಡಿಯಾದ ಎರಡು ವಿಮಾನಗಳು ಸಂಚಾರ ನಡೆಸುತ್ತಿದ್ದವು. 

‘ಬಾಂಗ್ಲಾದೇಶದ ಸದ್ಯದ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು, ತಕ್ಷಣವೇ ಜಾರಿಗೆ ಬರುವಂತೆ ಢಾಕಾಕ್ಕೆ ಹೋಗುವ ಮತ್ತು ಅಲ್ಲಿಂದ ಬರುವ ವಿಮಾನಗಳ ನಿಗದಿತ ಕಾರ್ಯಾಚರಣೆಯನ್ನು ನಾವು ರದ್ದುಗೊಳಿಸಿದ್ದೇವೆ. ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ’ ಎಂದು ಏರ್‌ ಇಂಡಿಯಾದ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಭಾರತ– ಬಾಂಗ್ಲಾ ನಡುವೆ ವ್ಯಾಪಾರ ಸ್ಥಗಿತ

ಕೋಲ್ಕತ್ತ : ಭಾರತ -ಬಾಂಗ್ಲಾದೇಶದ ನಡುವೆ ವ್ಯಾಪಾರವು ಸೋಮವಾರ ಮಧ್ಯಾಹ್ನದಿಂದಲೇ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಇಲ್ಲಿನ ವರ್ತಕರು ತಿಳಿಸಿದ್ದಾರೆ.

ಬಾಂಗ್ಲಾದೇಶ ಸರ್ಕಾರವು ಅಗತ್ಯ ಸೇವೆಗಳನ್ನು ಹೊರತುಪಡಿಸಿ ಮೂರು ದಿನಗಳ ಮಟ್ಟಿಗೆ ವ್ಯಾಪಾರಕ್ಕೆ ರಜೆ ಘೋಷಿಸಿ ಭಾನುವಾರ ಅಧಿಸೂಚನೆ ಹೊರಡಿಸಿತ್ತು.   

‘ಬಾಂಗ್ಲಾದೇಶದ ಕಸ್ಟಮ್ಸ್‌ನಿಂದ ತಮ್ಮ ಲ್ಯಾಂಡ್‌ಪೋರ್ಟ್‌ಗಳಲ್ಲಿ ಕ್ಲಿಯರೆನ್ಸ್ ಕೊರತೆಯಿಂದಾಗಿ, ಎಲ್ಲ ಭೂ ಬಂದರುಗಳಲ್ಲಿ ರಫ್ತು ಮತ್ತು ಆಮದು ಚಟುವಟಿಕೆಗಳು ಸ್ಥಗಿತಗೊಂಡಿವೆ. ಸೋಮವಾರ ಬೆಳಿಗ್ಗೆ ಸ್ವಲ್ಪಮಟ್ಟಿಗಿನ ವ್ಯಾಪಾರ ನಡೆಯಿತು. ಆದರೆ ನಂತರ ಅದು ನಿಂತುಹೋಯಿತು. ಬಾಂಗ್ಲಾದೇಶದ ಗಡಿಗಳನ್ನು ವ್ಯಾಪಾರಕ್ಕೆ ಮುಚ್ಚಲಾಗಿದೆ’ ಎಂದು ಪಶ್ಚಿಮ ಬಂಗಾಳದ ರಫ್ತುದಾರರ ಸಮನ್ವಯ ಸಮಿತಿ ಕಾರ್ಯದರ್ಶಿ ಉಜ್ಜಲ್ ಸಹಾ ಹೇಳಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.