ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಸೀಟ್ ಮೇಲೆಪಾನಮತ್ತ ವ್ಯಕ್ತಿಯೋರ್ವ ಮೂತ್ರ ವಿಸರ್ಜಿಸಿರುವ ಪ್ರಸಂಗ ನಡೆದಿದೆ.
ಆಗಸ್ಟ್ 30 ರಂದು ನ್ಯೂಯಾರ್ಕ್‌ನಿಂದ ನವದೆಹಲಿಯತ್ತ ಹೊರಟಿದ್ದ ಎಐ 102 ವಿಮಾನದಲ್ಲಿ ಈ ಘಟನೆ ವರದಿಯಾಗಿದ್ದು,ಈ ಸಂಬಂಧ ವಿವರ ನೀಡುವಂತೆ ನಾಗರೀಕ ವಿಮಾನಯಾನ ಸಚಿವಾಲಯವು ಅಧಿಕಾರಿಗಳಿಗೆ ಸೂಚಿಸಿದೆ.
ಮಹಿಳಾ ಪ್ರಯಾಣಿಕರಮಗಳಾದ ಇಂದ್ರಾಣಿ ಘೋಷ್ ಎನ್ನುವವರು ಘಟನೆ ಕುರಿತು ಶುಕ್ರವಾರ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.
‘ಜಾನ್ ಎಫ್ ಕೆನಡಿ ವಿಮಾನ ನಿಲ್ದಾಣದಿಂದ ದೆಹಲಿಗೆ ಒಬ್ಬಂಟಿಯಾಗಿ ಪ್ರಯಾಣಿಸುತ್ತಿದ್ದ ನನ್ನ ತಾಯಿ ಅತ್ಯಂತ ಆಘಾತಕಾರಿ ಘಟನೆಯನ್ನು ಎದುರಿಸಿದ್ದಾರೆ. ಊಟ ಮುಗಿಸಿ ತೆರಳುತ್ತಿದ್ದ ವೇಳೆ ವ್ಯಕ್ತಿಯೋರ್ವ ಅವರ ಸೀಟ್(36D) ಮೇಲೆ ಮೂತ್ರ ವಿಸರ್ಜಿಸಿದ್ದಾರೆ. ದಯವಿಟ್ಟು ತಕ್ಷಣ ಗಮನಹರಿಸಿ’ ಎಂದು ತಿಳಿಸಿದ್ದು, ಟ್ವೀಟ್ ಜೊತೆಗೆ ವಿಮಾನಯಾನ ಸಚಿವ ಸುರೇಶ್ ಪ್ರಭು, ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಏರ್ ಇಂಡಿಯಾವನ್ನು ಟ್ಯಾಗ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಸಿರುವ ವಿಮಾನಯಾನ ರಾಜ್ಯ ಖಾತೆ ಸಚಿವ ಜಯಂತ್ ಸಿನ್ಹಾ, ಘಟನೆ ಕುರಿತು ಗಮನಹರಿಸುವಂತೆ ಮತ್ತು ವಿಮಾನಯಾನ ಸಚಿವಾಲಯ ಅಥವಾ ವಿಮಾನಯಾನ ಇಲಾಖೆ ನಿರ್ದೇಶಕರಿಗೆ ಕೂಡಲೇ ವರದಿ ನೀಡುವಂತೆ ಏರ್ ಇಂಡಿಯಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.