ಲಂಡನ್, ಮುಂಬೈ(ಪಿಟಿಐ, ರಾಯಿಟರ್ಸ್): ಬಾಂಬ್ ಬೆದರಿಕೆಯಿಂದಾಗಿ ಮುಂಬೈನಿಂದ ಅಮೆರಿಕದ ನೆವಾರ್ಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವನ್ನು ಗುರುವಾರ ಲಂಡನ್‌ನ ಸ್ಟ್ಯಾನ್‌ಸ್ಟೆಡ್ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಇಳಿಸಲಾಯಿತು. ಆದರೆ, ಇದು ಹುಸಿ ಬಾಂಬ್ ಕರೆ ಎನ್ನುವುದು ತನಿಖೆ ಬಳಿಕ ದೃಢಪಟ್ಟಿದೆ.
ಮುಂಜಾಗ್ರತ ಕ್ರಮವಾಗಿ ‘ಎಐ 191’ ವಿಮಾನವನ್ನು ನಿಲ್ದಾಣದಲ್ಲಿ ಇಳಿಸಲಾಯಿತು. ಇದರಿಂದಾಗಿ ಇತರ ಎಲ್ಲ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.
ವಿಮಾನದಲ್ಲಿ 327 ಪ್ರಯಾಣಿಕರಿದ್ದರು. ಬೆದರಿಕೆ ಕರೆ ಬಂದ ಬಳಿಕ ಬೆಳಿಗ್ಗೆ 9.50ರ ಸುಮಾರಿಗೆ ‘ರಾಯಲ್ ಏರ್‌ಫೋರ್ಸ್’ ಜೆಟ್‌ಗಳ ನೆರವು ಪಡೆಯಲಾಯಿತು. ಮುಂಬೈ ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಬಂದ ಬಳಿಕ ತಕ್ಷಣವೇ ವಿಮಾನವನ್ನು ತುರ್ತಾಗಿ ಇಳಿಸಲು ಸೂಚಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ವಿಮಾನವನ್ನು ಸಂಪೂರ್ಣವಾಗಿ ಪರಿಶೀಲಿಸಲಾಯಿತು. ಯಾವುದೇ ಸಮಸ್ಯೆ ಕಂಡು ಬಂದಿಲ್ಲ. ಪ್ರಯಾಣಿಕರಿಗೆ ತೊಂದರೆಯಾಗದಂತೆ ಎಲ್ಲ ಕ್ರಮ
ಗಳನ್ನು ಕೈಗೊಳ್ಳಲಾಗಿದೆ. ಎಲ್ಲ ರೀತಿಯ ಅನುಮತಿ ಪ್ರಕ್ರಿಯೆಗಳನ್ನು ಪಡೆದ ನಂತರ ವಿಮಾನ ಹಾರಾಟ ಕೈಗೊಳ್ಳಲಾಗಿದೆ. ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ಕೈಗೊಳ್ಳಲಾಗುವುದು’ ಎಂದು ವಕ್ತಾರರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.