ADVERTISEMENT

ಕೋವಿಡ್‌–19: ದುಬೈ, ಬಹರೇನ್‌ನಿಂದ ತಾಯ್ನಾಡಿಗೆ ಮರಳಿದ 541 ಭಾರತೀಯರು 

ಏಜೆನ್ಸೀಸ್
Published 11 ಮೇ 2020, 1:35 IST
Last Updated 11 ಮೇ 2020, 1:35 IST
ಏರ್ ಇಂಡಿಯಾ ವಿಮಾನ
ಏರ್ ಇಂಡಿಯಾ ವಿಮಾನ   

ಚೆನ್ನೈ: ಬಹರೇನ್‌ ಮತ್ತು ದುಬೈನಿಂದ ಏರ್ ಇಂಡಿಯಾದ ಮೂರು ವಿಶೇಷ ವಿಮಾನಗಳು ಶನಿವಾರ ಬೆಳಗ್ಗೆ 541 ಭಾರತೀಯರನ್ನು ಕರೆತಂದವು ಎಂದು ವಿಮಾನಯಾನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದುಬೈನಿಂದ ಎರಡು ವಿಶೇಷ ವಿಮಾನಗಳ ಮೂಲಕ 359 ಭಾರತೀಯರು ಚೆನ್ನೈನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ್ದಾರೆ. ಮೊದಲ ವಿಮಾನದಲ್ಲಿ 177 ಹಾಗೂ ಎರಡನೇ ವಿಮಾನದಲ್ಲಿ ಮೂವರು ಮಕ್ಕಳು ಸೇರಿದಂತೆ 182 ಜನರು ಬಂದಿದ್ದಾರೆ.

ಬಹರೇನ್‌ನಿಂದ ಕೊಚ್ಚಿಗೆ ಆಗಮಿಸಿದ ವಿಶೇಷ ವಿಮಾನದಲ್ಲಿ 182 ಭಾರತೀಯರು ತವರಿಗೆ ಮರಳಿದ್ದಾರೆ.

ವಿದೇಶಗಳಿಂದ ಬಂದ ಎಲ್ಲಾ ಪ್ರಯಾಣಿಕರನ್ನು ಸ್ಕ್ರೀನ್‌ ಟೆಸ್ಟ್‌ಗೆ ಒಳಪಡಿಸಲಾಗಿದೆ ಎಂದು ವಿಮಾನಯಾನ ಹಾಗೂ ಸ್ಥಳೀಯ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ.

ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಹಂತಹಂತವಾಗಿ ವಾಪಸ್ ಕರೆಸಿಕೊಳ್ಳುವ ವಂದೇ ಭಾರತ್‌ ಮಿಷನ್‌ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಇದರ ಭಾಗವಾಗಿ, ಲಾಕ್‌ಡೌನ್‌ನಿಂದಾಗಿ ವಿದೇಶದಲ್ಲಿ ಸಿಲುಕಿರುವ ಸುಮಾರು 15 ಸಾವಿರ ಭಾರತೀಯ ಪ್ರಜೆಗಳನ್ನು ಮರಳಿ ತಾಯ್ನಾಡಿಗೆ ಕರೆತರಲು ಮೇ 13ರವರೆಗೆ ಏರ್‌ ಇಂಡಿಯಾದ 64 ವಿಮಾನಗಳು ಕಾರ್ಯನಿರ್ವಹಿಸಲಿವೆ ಎಂದೂ ಸರ್ಕಾರ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.