ನವದೆಹಲಿ: ದೇಶದ ಪ್ರಮುಖ ಏರ್‌ಲೈನ್ಸ್ ಸಂಸ್ಥೆಯಾದ ಏರ್ ಇಂಡಿಯಾ ತನ್ನ ಅಂಗ ಸಂಸ್ಥೆಗಳಾದ ‘ಏರ್ ಇಂಡಿಯಾ ಎಕ್ಸ್‌ಪ್ರೆಸ್’ ಹಾಗೂ ‘ಏರ್ ಏಷ್ಯಾ ಇಂಡಿಯಾ’ಗಳಿಗೆ ಏಕೀಕೃತ ಟಿಕೆಟ್ ಬುಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ.
ಈ ನಿಯಮ ಶೀಘ್ರವೇ ಜಾರಿಗೆ ಬರಲಿದೆ. ಇದಕ್ಕಾಗಿ ಏಕೀಕೃತ airindiaexpress.com. ವೆಬ್‌ಸೈಟ್ ಕಾರ್ಯನಿರ್ವಹಿಸಲಿದೆ ಎಂದು ಏರ್ ಇಂಡಿಯಾ ತಿಳಿಸಿದೆ.
ಇದುವರೆಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಹಾಗೂ ಏರ್ ಏಷಿಯಾ ಇಂಡಿಯಾಗಳಿಗೆ ಪ್ರತ್ಯೇಕವಾದ ಟಿಕೆಟ್ ಬುಕಿಂಗ್ ವ್ಯವಸ್ಥೆ ಇತ್ತು.
ಇತ್ತೀಚೆಗೆ ಏರ್‌ಏಷ್ಯಾವನ್ನು ಏರ್ ಇಂಡಿಯಾ ಖರೀದಿಸಿದ ನಂತರ ಸಂಸ್ಥೆಯಲ್ಲಿ ಇದು ಮಹತ್ವದ ಬದಲಾವಣೆಯಾಗಿದೆ. ಇದರಿಂದ ಪ್ರಯಾಣಿಕರಿಗೆ ತುಂಬಾ ಅನುಕೂಲ ಆಗಲಿದೆ ಎಂದು ಸಂಸ್ಥೆ ತಿಳಿಸಿದೆ.
ದೇಶೀಯ ಹಾಗೂ ಅಂತರರಾಷ್ಟ್ರೀಯ ಪ್ರಯಾಣದ ಟಿಕೆಟ್‌ಗಳನ್ನು ಬುಕ್ ಮಾಡುವುದಾಗಲಿ, ಕ್ಯಾನ್ಸಲ್ ಮಾಡುವುದಾಗಲಿ ಇತರೆ ಸೇವೆಗಳೆಲ್ಲವೂ ಈ ಏಕೀಕೃತ ವ್ಯವಸ್ಥೆಯಲ್ಲಿ ಇರಲಿವೆ ಎಂದು ಕಡಿಮೆ ಬೆಲೆಯಲ್ಲಿ ವಿಮಾನಯಾನ ಒದಗಿಸುವ ಮುಂಚೂಣಿ ಸಂಸ್ಥೆಯಾಗಿರುವ ಏರ್ ಇಂಡಿಯಾ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.