ADVERTISEMENT

ಬಾಂಬ್ ಬೆದರಿಕೆ: ಷಿಕಾಗೊ ಹೊರಟಿದ್ದ ವಿಮಾನ ಕೆನಡಾಕ್ಕೆ ಮಾರ್ಗ ಬದಲಾವಣೆ

ಪಿಟಿಐ
Published 15 ಅಕ್ಟೋಬರ್ 2024, 12:35 IST
Last Updated 15 ಅಕ್ಟೋಬರ್ 2024, 12:35 IST
<div class="paragraphs"><p>ಏರ್ ಇಂಡಿಯಾ</p></div>

ಏರ್ ಇಂಡಿಯಾ

   

(ರಾಯಿಟರ್ಸ್ ಸಂಗ್ರಹ ಚಿತ್ರ)

ನವದೆಹಲಿ: ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ದೆಹಲಿಯಿಂದ ಷಿಕಾಗೊ ಹೊರಟಿದ್ದ ಏರ್ ಇಂಡಿಯಾ ವಿಮಾನ, ಕೆನಡಾದ ಇಕ್ವಾಲೆಟ್ (Iqaluit) ವಿಮಾನ ನಿಲ್ದಾಣಕ್ಕೆ ಮಾರ್ಗ ಬದಲಿಸಿದೆ ಎಂದು ಏರ್‌ಲೈನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಇಂದು (ಅ.15) ದೆಹಲಿಯಿಂದ ಷಿಕಾಗೊಗೆ ಹೊರಟಿದ್ದ AI127 ವಿಮಾನಕ್ಕೆ ಆನ್‌ಲೈನ್ ಮೂಲಕ ಬೆದರಿಕೆ ಸಂದೇಶ ಬಂದಿತ್ತು. ಮುಂಜಾಗ್ರತಾ ಕ್ರಮವಾಗಿ ಕೆನಡಾದ ಇಕ್ವಾಲೆಟ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ವಿಮಾನವನ್ನು ಇಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಭದ್ರತಾ ನಿಯಮದ ಪ್ರಕಾರ ವಿಮಾನ ಹಾಗೂ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಪ್ರಯಾಣಿಕರಿಗೆ ಅಗತ್ಯ ಸೌಕರ್ಯ ಕಲ್ಪಿಸಲು ವಿಮಾನ ನಿಲ್ದಾಣಗಳಲ್ಲಿ ಏಜೆನ್ಸಿಗಳನ್ನು ನಿಯೋಜಿಸಲಾಗಿದೆ.

ಇಂದು ಮುಂಬೈಯಿಂದ ನ್ಯೂಯಾರ್ಕ್‌ಗೆ ಹೊರಟಿದ್ದ ಮಗದೊಂದು ಏರ್ ಇಂಡಿಯಾ ವಿಮಾನದಲ್ಲಿ ಬಾಂಬ್ ಇದೆ ಎಂದು ಬಂದ ಹುಸಿ ಬೆದರಿಕೆ ಕರೆಯಿಂದಾಗಿ ದೆಹಲಿಯಲ್ಲಿ ಲ್ಯಾಂಡ್ ಮಾಡಿತ್ತು. ಬಳಿಕ ನಡೆದ ಪರಿಶೀಲನೆಯಲ್ಲಿ ಅನುಮಾನಾಸ್ಪದವಾಗಿ ಯಾವುದೇ ವಸ್ತು ಪತ್ತೆಯಾಗಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.