ನವದೆಹಲಿ:ಏರ್‌ಸೆಲ್–ಮ್ಯಾಕ್ಸಿಸ್ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಆಗಸ್ಟ್ 7ರ ವರೆಗೂ ಬಂಧನ ಭೀತಿಯಿಂದ ಪಾರಾಗಿದ್ದಾರೆ.
₹3,500 ಕೋಟಿ ಮೊತ್ತದ ಏರ್‌ಸೆಲ್ ಮ್ಯಾಕ್ಸಿಸ್ ಮತ್ತು ₹ 305 ಕೋಟಿ ಐಎನ್‌ಎಕ್ಸ್ ಮೀಡಿಯಾ ಹಗರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಚಿದಂಬರಂ ಮೇ 30ರಂದು ಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದಲ್ಲಿ ಎಲ್ಲ ಸಾಕ್ಷ್ಯಗಳು ಮರುಸೃಷ್ಟಿಯಂತೆ ಕಾಣುತ್ತಿರುವುದಾಗಿ ಹೇಳಿದ್ದರು.
ಸಿಬಿಐ ಮತ್ತು ಇಡಿ 2011 ಹಾಗೂ 2012ರಲ್ಲಿ ದಾಖಲಿಸಿದ್ದ ಏರ್‌ಸೆಲ್–ಮ್ಯಾಕ್ಸಿಸ್ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಮಂಗಳವಾರದ ವರೆಗೂ ಕಾರ್ತಿ ಬಂಧನಕ್ಕೆ ಕೋರ್ಟ್ ಮಧ್ಯಂತರ ತಡೆ ನೀಡಿತ್ತು.
ಚಿದಂಬರಂ ಮತ್ತು ಕಾರ್ತಿ ಬಂಧನಕ್ಕೆ ನೀಡಲಾಗಿದ್ದ ಮಧ್ಯಂತರ ತಡೆ ಆದೇಶವನ್ನು ದೆಹಲಿ ಹೈಕೋರ್ಟ್ ಮಂಗಳವಾರ ಆಗಸ್ಟ್ 7ರವರೆಗೂ ವಿಸ್ತರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.