ADVERTISEMENT

ಆಕಾಸಾ ಏರ್‌‌ಲೈನ್‌ ದತ್ತಾಂಶ ಸೋರಿಕೆ: ಗ್ರಾಹಕರ ಕ್ಷಮೆ ಕೋರಿದ ಸಂಸ್ಥೆ

ಪಿಟಿಐ
Published 28 ಆಗಸ್ಟ್ 2022, 11:20 IST
Last Updated 28 ಆಗಸ್ಟ್ 2022, 11:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಆಕಾಸಾ ಏರ್‌‌ಲೈನ್‌ ಸಂಸ್ಥೆಯ ದತ್ತಾಂಶ ಸೋರಿಕೆಯಾಗಿದ್ದು, ಅನಧಿಕೃತ ವ್ಯಕ್ತಿಗಳಿಗೆ ಬಳಕೆದಾರರ ಮಾಹಿತಿ ದೊರೆತಿದೆ.

ಈ ವಿಚಾರವಾಗಿ ಸಂಸ್ಥೆಯು ಗ್ರಾಹಕರ ಕ್ಷಮೆ ಕೇಳಿದ್ದು, ‘ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ಪಡೆ (ಸಿಇಆರ್‌ಟಿ–ಇನ್)’ಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದೆ.

ಲಾಗಿನ್ ಮತ್ತು ಸೈನ್ ಅಪ್‌ ಸೇವೆಗಳಲ್ಲಿ ಆಗಸ್ಟ್ 25ರಂದು ತಾತ್ಕಾಲಿಕ ತಾಂತ್ರಿಕ ದೋಷ ಕಂಡುಬಂದಿತ್ತು. ಬಳಿಕ ಆಕಾಸಾ ಏರ್‌‌ಲೈನ್‌ನ ಕೆಲವು ಮಂದಿ ನೋಂದಾಯಿತ ಬಳಕೆದಾರರ ಹೆಸರು, ಇ–ಮೇಲ್ ವಿಳಾಸ ಹಾಗೂ ದೂರವಾಣಿ ವಿವರಗಳು ಸೋರಿಕೆಯಾಗಿವೆ. ಇವುಗಳನ್ನು ಹೊರತುಪಡಿಸಿ ಪ್ರಯಾಣ ಮಾಹಿತಿ ಸೇರಿದಂತೆ ಹೆಚ್ಚಿನ ಯಾವುದೇ ವಿವರ ಸೋರಿಕೆಯಾಗಿಲ್ಲ ಎಂಬ ಬಗ್ಗೆ ಖಾತರಿ ನೀಡುತ್ತಿದ್ದೇವೆ ಎಂದೂ ಸಂಸ್ಥೆ ತಿಳಿಸಿದೆ.

ಆಕಾಸಾ ಏರ್ ಕಂಪನಿಯು ದೇಶದಲ್ಲಿ ಆಗಸ್ಟ್ 7ರಿಂದ ವಿಮಾನಯಾನ ಸೇವೆ ಆರಂಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.