ಲಖನೌ: ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್, ಪಕ್ಷದ ಸಂಸ್ಥಾಪಕ ಹಾಗೂ ತಮ್ಮ ತಂದೆ ದಿವಗಂತ ಮುಲಾಯಂ ಸಿಂಗ್ ಅವರ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿದ್ದಾರೆ.
ಸಮಾಜವಾದಿ ಚಳುವಳಿಯ ಇತಿಹಾಸ ಮತ್ತು ಚಿಂತನೆಗಳನ್ನು ಕ್ಯಾಲೆಂಡರ್‌ನಲ್ಲಿ ಉಲ್ಲೇಖಿಸಲಾಗಿದೆ.
ಮುಲಾಯಂ ಸಿಂಗ್‌ಗೆ ಸಂಬಂಧಿತ ಘಟನೆಗಳನ್ನು ಚಿತ್ರಗಳೊಂದಿಗೆ ಪ್ರದರ್ಶಿಸಲಾಗಿದೆ. 12 ಪುಟಗಳ ಕ್ಯಾಲೆಂಡರ್ ಅನ್ನು ಮುಲಾಯಂ ಸಿಂಗ್ ಬದುಕಿನ ಪಯಣಕ್ಕಾಗಿಯೇ ಮೀಸಲಿಡಲಾಗಿದೆ.
ಸಮಾಜವಾದಿ ಪಕ್ಷದ ಸಂಸ್ಥಾಪಕ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ, ಅ.10, 2022ರಂದು ವಯೋ ಸಹಜ ಅನಾರೋಗ್ಯದಿಂದ ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.