ADVERTISEMENT

300 ಕೋಟಿ ಊಟ ಬಡಿಸಿದ ಅಕ್ಷಯಪಾತ್ರೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2019, 20:16 IST
Last Updated 11 ಫೆಬ್ರುವರಿ 2019, 20:16 IST
ಪ್ರಧಾನಿ ನರೇಂದ್ರ ಮೋದಿ ಅವರು ಮಕ್ಕಳಿಗೆ ಊಟ ಬಡಿಸಿದರು
ಪ್ರಧಾನಿ ನರೇಂದ್ರ ಮೋದಿ ಅವರು ಮಕ್ಕಳಿಗೆ ಊಟ ಬಡಿಸಿದರು   

ವೃಂದಾವನ, ಉತ್ತರ ಪ್ರದೇಶ: ಬೆಂಗಳೂರು ಮೂಲದ ಅಕ್ಷಯಪಾತ್ರೆ ಪ್ರತಿಷ್ಠಾನವು 300 ಕೋಟಿ ಊಟ ಬಡಿಸಿದ ಮೈಲುಗಲ್ಲು ನಿರ್ಮಿಸಿದೆ. ಇಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರುಮುನ್ನೂರನೇ ಕೋಟಿ ಊಟವನ್ನು ಶಾಲಾಮಕ್ಕಳಿಗೆ ಔಪಚಾರಿಕವಾಗಿ ಬಡಿಸುವ ಮೂಲಕ ಪ್ರತಿಷ್ಠಾನದ ಕಾರ್ಯವನ್ನು ಶ್ಲಾಘಿಸಿದರು.

ಅಡುಗೆ ಮಾಡುವವರು, ಬಡಿಸುವವರು ಸೇರಿದಂತೆ ಪ್ರತಿಷ್ಠಾನದಲ್ಲಿರುವ ಪ್ರತಿಯೊಬ್ಬರೂ ರಾಷ್ಟ್ರಕ್ಕೆ ನೆರವಾಗುತ್ತಿದ್ದಾರೆ. ಸಮರ್ಪಣಾ ಮನೋಭಾವದಿಂದ ಇದು ಸಾಧ್ಯವಾಗಿದೆ ಎಂದು ಪ್ರಶಂಸಿಸಿದರು.

ಈ ಮೈಲಿಗಲ್ಲು ತಲುಪಲು ನೆರವಾದಕೇಂದ್ರ ಸರ್ಕಾರ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ರಾಜ್ಯ ಸರ್ಕಾರಗಳು, ಕಾರ್ಪೊರೆಟ್ ಸಂಸ್ಥೆಗಳು, ದಾನಿಗಳು, ಪಾಲುದಾರರ ಬೆಂಬಲಕ್ಕೆ ಪ್ರತಿಷ್ಠಾನದ ಅಧ್ಯಕ್ಷ ಮಧುಪಂಡಿತ ದಾಸ ಅವರುಕೃತಜ್ಞತೆ ಅರ್ಪಿಸಿದರು. ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಬಿಸಿ, ಸುರಕ್ಷಿತ ಮತ್ತು ರುಚಿಕರ ಊಟ ಒದಗಿಸುವ ಬದ್ಧತೆಯನ್ನು ಪುನರುಚ್ಚರಿಸಿದರು.

ADVERTISEMENT

ಉತ್ತರ ಪ್ರದೇಶ ರಾಜ್ಯಪಾಲ ರಾಮ್ ನಾಯಕ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಪ್ರತಿಷ್ಠಾನದ ಉಪಾಧ್ಯಕ್ಷ ಚಂಚಲಾಪತಿ ದಾಸ, ಸ್ವತಂತ್ರ ಟ್ರಸ್ಟಿ ಮೋಹನದಾಸ ಪೈ ಇತರರುಉಪಸ್ಥಿತರಿದ್ದರು.

2012ರಲ್ಲಿ 100 ಕೋಟಿಯ ಹಾಗೂ 2016ರಲ್ಲಿ 200 ಕೋಟಿ ಊಟ ಬಡಿಸುವ ಗುರಿಯನ್ನು ಪ್ರತಿಷ್ಠಾನ ತಲುಪಿತ್ತು. ಈಗ 300 ಕೋಟಿ ಊಟವನ್ನು ಪೂರೈಸಿದ್ದು, ಈ ಸೇವೆ ಮಾಡಿದ ಜಗತ್ತಿನ ಮೊದಲ ಸರ್ಕಾರೇತರ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪ್ರತಿಷ್ಠಾನ ಪಾತ್ರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.