ಗುಜರಾತ್ : 2002ರ ನರೋಡಾ ಗಾಮ್ ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿಯ ಮಾಜಿ ಸಚಿವೆ ಮಾಯಾ ಕೊಡ್ನಾನಿ ಸೇರಿದಂತೆ ಎಲ್ಲ 67 ಆರೋಪಿಗಳನ್ನು ಗುಜರಾತ್‌ನ ವಿಶೇಷ ನ್ಯಾಯಾಲಯ ಗುರುವಾರ ಖುಲಾಸೆಗೊಳಿಸಿದೆ. ಈ ಗಲಭೆಯಲ್ಲಿ 11 ಮಂದಿ ಹತ್ಯೆಯಾಗಿದ್ದರು.
ನ್ಯಾಯಮೂರ್ತಿ ಎಸ್.ಕೆ ಬಾಕ್ಸಿ ಪ್ರಕರಣದ ವಿಚಾರಣೆಯನ್ನು ನಡೆಸಿದ್ದು, ನರೋಡಾ ಗಾಮ್ ಗಲಭೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ. ಸುಪ್ರೀಂಕೋರ್ಟ್ ನೇಮಿಸಿದ್ದ ‘ವಿಶೇಷ ತನಿಖಾ ತಂಡ‘ ನರೋಡಾ ಗಾಮ್ ಗಲಭೆ ಪ್ರಕರಣದ ತನಿಖೆಯನ್ನು ನಡೆಸಿತ್ತು.
ಖುಲಾಸೆಗೊಂಡವರಲ್ಲಿ ಮಾಯಾ ಕೊಡ್ನಾನಿ, ವಿಶ್ವ ಹಿಂದೂ ಪರಿಷತ್‌ನ ಮಾಜಿ ನಾಯಕ ಜಯದೀಪ್ ಪಟೇಲ್ ಮತ್ತು ಬಜರಂಗದಳ ಮಾಜಿ ನಾಯಕ ಬಾಬು ಬಜರಂಗಿ ಇದ್ದಾರೆ. ಪ್ರಕರಣದಲ್ಲಿ ಒಟ್ಟು 86 ಮಂದಿ ಆರೋಪಿಗಳಾಗಿದ್ದು, ಅವರಲ್ಲಿ 18 ಮಂದಿ ವಿಚಾರಣೆ ಬಾಕಿ ಇರುವಾಗಲೇ ಸಾವನ್ನಪ್ಪಿದ್ದಾರೆ. ಒಬ್ಬ ಆರೋಪಿಯನ್ನು ನ್ಯಾಯಾಲಯ ಈ ಮೊದಲೇ ಬಿಡುಗಡೆಗೊಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.