ನವದೆಹಲಿ: ಚೀನಾದವರಿಗೆ ಭಾರತ ನೀಡಿರುವ ವೀಸಾಗಳ ಮಾನ್ಯತೆಯನ್ನು ಭಾರತ ಸರ್ಕಾರ ಗುರುವಾರ ರದ್ದು ಮಾಡಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.
‘ಸದ್ಯ ಅಸ್ತಿತ್ವದಲ್ಲಿರುವ ಇ–ವೀಸಾಗಳಿಗೆ ಮಾನ್ಯತೆ ಇರುವುದಿಲ್ಲ. ಹಾಗೆಯೇ, ಸಾಮಾನ್ಯ ವೀಸಾಗಳೂ ಮಾನ್ಯತೆ ಕಳೆದುಕೊಳ್ಳಲಿವೆ. ಅನಿವಾರ್ಯ ಕಾರಣಗಳಿಗಾಗಿ ಭಾರತಕ್ಕೆ ಬರಬೇಕಾದವರು ವೀಸಾದ ಅಗತ್ಯವಿದ್ದರೆ ಅವರು ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಬಹುದು. ಅಥವಾ ಹೊಸದಾಗಿ ವಿಸಾಕ್ಕೆ ಅರ್ಜಿ ಸಲ್ಲಿಸಬೇಕು,’ ಎಂದು ರವೀಶ್ ಕುಮಾರ್ ತಿಳಿಸಿದ್ದಾರೆ.
‘ಈಗಾಗಲೇ 640 ಭಾರತೀಯರನ್ನು ನಾವು ಯಶಸ್ವಿಯಾಗಿ ದೇಶಕ್ಕೆ ಕರೆ ತಂದಿದ್ದೇವೆ. ಏಳು ಮಂದಿ ಮಾಲ್ಡೀವ್ಸ್ ಪ್ರಜೆಗಳನ್ನೂ ಕರೆತರಲಾಗಿದೆ. ಅತ್ಯಂತ ಸಂಕೀರ್ಣ ಕಾರ್ಯಾಚರಣೆಯನ್ನು ನಾವು ಯಶಸ್ವಿಯಾಗಿ ನಿಭಾಯಿಸಿದ್ದೇವೆ. ಇದಕ್ಕೆ ನೆರವಾದ ಚೀನಾ ಸರ್ಕಾರದ ನಡೆಯನ್ನು ಭಾರತ ಅಭಿನಂದಿಸುತ್ತೇವೆ,’ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.