ಚಂಡೀಗಡ: ಆಮ್ ಆದ್ಮಿ ಪಕ್ಷದ (ಎಎಪಿ) ಐವರು ಅಭ್ಯರ್ಥಿಗಳು ಪಂಜಾಬ್‌ನಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಂಜಾಬ್‌ನಿಂದ ಐವರು, ಕೇರಳದಿಂದ ಮೂವರು, ಅಸ್ಸಾಂನಿಂದ ಇಬ್ಬರು ಮತ್ತುಹಿಮಾಚಲ ಪ್ರದೇಶ, ನಾಗಾಲ್ಯಾಂಡ್ ಹಾಗೂ ತ್ರಿಪುರಾದಿಂದ ತಲಾ ಒಬ್ಬ ಸದಸ್ಯರ ಆಯ್ಕೆಗೆ ಮಾರ್ಚ್31ರಂದು ಚುನಾವಣೆ ನಿಗದಿಯಾಗಿದೆ.
ಹೀಗಾಗಿ ಪಂಜಾಬ್‌ನಿಂದ ಮಾಜಿ ಕ್ರಿಕೆಟಿಗ ಹರಭಜನ್ ಸಿಂಗ್, ದೆಹಲಿಯ ಎಎಪಿ ಶಾಸಕ ರಾಘವ ಛಡ್ಡಾ, ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ ಸಂಸ್ಥಾಪಕ ಅಶೋಕ್ ಮಿತ್ತಲ್, ಐಐಟಿ ದೆಹಲಿಯ ಸಹಾಯಕ ಪ್ರಾಧ್ಯಾಪಕ ಸಂದೀಪ್ ಪಾಠಕ್ ಹಾಗೂ ಉದ್ಯಮಿ ಸಂಜೀವ್ ಅರೋರಾ ಅವರು ಎಎಪಿ ಅಭ್ಯರ್ಥಿಗಳಾಗಿ ಮಾರ್ಚ್ 21ರಂದು ನಾಮಪತ್ರ ಸಲ್ಲಿಸಿದ್ದರು.
ನಾಮಪತ್ರ ಹಿಂಪಡೆಯಲು ಇಂದು (ಮಾ.24) ಕೊನೆಯ ದಿನವಾಗಿತ್ತು.
ಎಎಪಿಯ ಎಲ್ಲ ಐವರು ಅಭ್ಯರ್ಥಿಗಳು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಸುರೀಂದರ್ ಪಾಲ್ ತಿಳಿಸಿದ್ದಾರೆ.
ಈ ಚುನಾವಣೆಗೆ ಪಂಜಾಬ್‌ನಿಂದಬೇರೆ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿರಲಿಲ್ಲ.
ಕಳೆದ ಬಾರಿ ಆಯ್ಕೆಯಾಗಿದ್ದಸುಖದೇವ್ ಸಿಂಗ್ ಧಿಂಡ್ಸಾ (ಎಸ್‌ಎಡಿ), ನರೇಶ್ ಗುಜ್ರಾಲ್ (ಎಸ್‌ಎಡಿ), ಪ್ರತಾಪ್ ಸಿಂಗ್ ಬಾಜ್ವಾ (ಕಾಂಗ್ರೆಸ್), ಶಾಂಶೇರ್ ಸಿಂಗ್ ದುಲ್ಲೋ(ಕಾಂಗ್ರೆಸ್) ಮತ್ತು ಸ್ವಯಾತ್ ಮಲಿಕ್ (ಬಿಜೆಪಿ) ಅವರ ಅವಧಿ ಏಪ್ರಿಲ್ 9ರಂದು ಮುಗಿಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.