ADVERTISEMENT

‘ಆಯುಷ್ ಸ್ಟಾರ್ಟ್‌ ಅಪ್ ಚಾಲೆಂಜ್‌’ಗೆ ಚಾಲನೆ

ಪಿಟಿಐ
Published 22 ಫೆಬ್ರುವರಿ 2022, 15:25 IST
Last Updated 22 ಫೆಬ್ರುವರಿ 2022, 15:25 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಆಯುರ್ವೇದ ವಲಯದಲ್ಲಿ ಆವಿಷ್ಕಾರಗಳು ಮತ್ತು ಪರ್ಯಾಯ ಚಿಕಿತ್ಸೆಯಲ್ಲಿ ಕೆಲಸ ಮಾಡಲು ಆರಂಭಿಕ ಹಂತದ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸ್ಟಾರ್ಟ್‌ಅಪ್ ಇಂಡಿಯಾದ ಸಹಯೋಗದೊಂದಿಗೆ ಅಖಿಲ ಭಾರತ ಆಯುರ್ವೇದ ಸಂಸ್ಥೆಯು (ಎಐಐಎ) ‘ಆಯುಷ್ ಸ್ಟಾರ್ಟ್ ಅಪ್ ಚಾಲೆಂಜ್’ ಅನ್ನು ಪ್ರಾರಂಭಿಸಿದೆ.

‘ಸ್ಪರ್ಧೆಯಲ್ಲಿ ಮೂರು ವಿಭಾಗಗಳಿದ್ದು, ಪ್ರತಿ ‌ವಿಭಾಗದಲ್ಲಿ ವಿಜೇತರಾದ ತಲಾ ಇಬ್ಬರಿಗೆ ₹ 1 ಲಕ್ಷ ನಗದು ಬಹುಮಾನ ನೀಡಲಾಗುವುದು. ರನ್ನರ್ ಅಪ್‌ಗಳಿಗೆ ₹ 50 ಸಾವಿರ ನೀಡಲಾಗುವುದು’ ಎಂದು ಎಐಐಎ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

‘ಶಿಕ್ಷಣ, ವೈಜ್ಞಾನಿಕ ಸಂಶೋಧನೆ ಮತ್ತು ಪ್ರಾಯೋಗಿಕ ಅಭ್ಯಾಸ– ಹೀಗೆ ಮೂರು ಪ್ರಮುಖ ವಿಭಾಗಗಳನ್ನು ಹೊಂದಿರುವ ಎಐಐಎ ಆಯುಷ್ ಸಚಿವಾಲಯದಲ್ಲಿ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ‘ಆಯುಷ್ ಸ್ಟಾರ್ಟ್ ಅಪ್ ಚಾಲೆಂಜ್‌’ನಲ್ಲಿ ಆರಂಭಿಕ ಹಂತದ ಸ್ಟಾರ್ಟ್ಅಪ್‌ಗಳು ಮತ್ತು ವ್ಯಕ್ತಿಗಳು ಗುಂಪಿನಂತೆ ಭಾಗವಹಿಸಬಹುದು’ ಎಂದು ಎಐಐಎ ನಿರ್ದೇಶಕಿ ಪ್ರೊ.ತನುಜಾ ಮನೋಜ್ ನೇಸರಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.