ADVERTISEMENT

ದೆಹಲಿ | ಗಣರಾಜ್ಯೋತ್ಸವ: ‘ಬೀಟಿಂಗ್‌ ರೀಟ್ರೀಟ್‌’ ಕಾರ್ಯಕ್ರಮ ನಾಳೆ

ಪಿಟಿಐ
Published 28 ಜನವರಿ 2024, 14:38 IST
Last Updated 28 ಜನವರಿ 2024, 14:38 IST
   

ನವದೆಹಲಿ: ಗಣರಾಜ್ಯೋತ್ಸವ ಕಾರ್ಯಕ್ರಮಗಳ ಸಮಾರೋಪದ ಅಂಗವಾಗಿ ಇಲ್ಲಿನ ವಿಜಯ್ ಚೌಕ್‌ನಲ್ಲಿ ಸೋಮವಾರ ‘ಬೀಟಿಂಗ್‌ ರೀಟ್ರೀಟ್‌’ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ ಸೇನಾಪಡೆ ಮತ್ತು ಅರೆಸೇನಾಪಡೆಯ ಬ್ಯಾಂಡ್‌ಗಳು ನುಡಿಸುವ ಭಾರತೀಯ ಗೀತೆಗಳಿಗೆ ರೈಸಿನಾ ಹಿಲ್ಸ್‌ ಸಾಕ್ಷಿಯಾಗಲಿದೆ ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿ‌ದೆ.

ಭೂಸೇನೆ, ನೌಕಾಪಡೆ, ವಾಯುಪಡೆ ಮತ್ತು ಸಿಆರ್‌ಪಿಎಫ್‌ನ ಬ್ಯಾಂಡ್‌ಗಳು 31 ಭಾರತೀಯ ಗೀತೆಗಳನ್ನು ನುಡಿಸಲಿವೆ ಎಂದಿದೆ.

ADVERTISEMENT

ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಕೇಂದ್ರ ಸಚಿವರು ಮತ್ತು ಅಧಿಕಾರಿಗಳು ಕಾರ್ಯಕ್ರಮವನ್ನು ವೀಕ್ಷಿಸುವರು ಎಂದೂ ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.