ಶಿಲ್ಲಾಂಗ್: ಎಲ್ಲ ಸ್ಥಳೀಯ ಭಾಷೆಗಳೂ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅಡಿ ರಾಷ್ಟ್ರೀಯ ಭಾಷೆಗಳೇ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಶನಿವಾರ ಹೇಳಿದ್ದಾರೆ.
‘ನಾರ್ತ್‌ಈಸ್ಟ್ ಹಿಲ್ ವಿಶ್ವವಿದ್ಯಾಲಯ’ದ 27ನೇ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಸ್ಥಳೀಯ ಭಾಷೆಗಳು ದೇಶದಲ್ಲಿ ಬಳಕೆಯಲ್ಲಿರುವ ಯಾವುದೇ ಭಾಷೆಗಿಂತಲೂ (ಅದು ಹಿಂದಿ ಇರಬಹುದು, ಇಂಗ್ಲಿಷ್ ಇರಬಹುದು) ಕಡಿಮೆ ಮಹತ್ವ ಹೊಂದಿಲ್ಲ. ಇದುವೇ ಎನ್‌ಇಪಿಯ ಮುಖ್ಯ ಲಕ್ಷಣ’ ಎಂದು ಹೇಳಿದ್ದಾರೆ.
‘ಎಲ್ಲ ಸ್ಥಳೀಯ ಭಾಷೆಗಳಿಗೆ ಮಹತ್ವ ನೀಡುವುದಕ್ಕಾಗಿಯೇ ಎನ್‌ಇಪಿ ರೂಪಿಸಲಾಗಿದೆ. ಹೊಸ ನೀತಿಯಡಿ ಎಲ್ಲ ಭಾಷೆಗಳನ್ನೂ ರಾಷ್ಟ್ರೀಯ ಭಾಷೆ ಎಂದೇ ಪರಿಗಣಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕಡ್ಡಾಯಗೊಳಿಸಿದ್ದಾರೆ. ಹೀಗಾಗಿ ಗಾರೊ, ಖಾಸಿ, ಜೈಂತಿಯಾ (ಮೇಘಾಲಯದ ಸ್ಥಳೀಯ ಭಾಷೆಗಳು) ಕೂಡ ರಾಷ್ಟ್ರೀಯ ಭಾಷೆಗಳೇ ಆಗುತ್ತವೆ’ ಎಂದು ಪ್ರಧಾನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.