ADVERTISEMENT

‘ಜೈ ಶ್ರೀರಾಮ್‌’ ಎಂದು ಹೇಳುವವರೆಲ್ಲ ಸಂತರಲ್ಲ: ರಶೀದ್‌ ಆಳ್ವಿ

ಪಿಟಿಐ
Published 12 ನವೆಂಬರ್ 2021, 11:12 IST
Last Updated 12 ನವೆಂಬರ್ 2021, 11:12 IST
ಅಯೋಧ್ಯೆ ರಾಮಮಂದಿರ ನೀಲ ನಕ್ಷೆ
ಅಯೋಧ್ಯೆ ರಾಮಮಂದಿರ ನೀಲ ನಕ್ಷೆ   

ಸಂಭಾಲ್‌, ಉತ್ತರ ಪ್ರದೇಶ: ‘ಜೈ ಶ್ರೀರಾಮ’ ಎಂದು ಘೋಷಣೆ ಕೂಗುವವರೆಲ್ಲ ಸಂತರಲ್ಲ’ ಎಂದು ಹಿರಿಯ ಕಾಂಗ್ರೆಸ್‌ ಮುಖಂಡ ರಶೀದ್‌ ಅಳ್ವಿ ಹೇಳಿದ್ದಾರೆ. ರಾಮಾಯಣದ ರಾಕ್ಷಸ ಪಾತ್ರವನ್ನು ಉಲ್ಲೇಖಿಸಿ, ಜನರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು’ ಎಂದು ಸಲಹೆ ಮಾಡಿದ್ದಾರೆ.

ಅಳ್ವಿ ಅವರು ಗುರುವಾರ ರಾತ್ರಿ ಇಲ್ಲಿ ಕಾಳಿಕಾ ಮಹೋತ್ಸವದಲ್ಲಿ ಹೇಳಿಕೆ ನೀಡಿದ್ದರು. ಬಿಜೆಪಿ ಮುಖಂಡ ಅಮಿತ್‌ ಮಾಳವೀಯ ಈ ಹೇಳಿಕೆಗೆ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದು, ‘ಘೋಷಣೆ ಕೂಗುವವರನ್ನು ರಾಕ್ಷಸರು ಎಂದು ಕರೆದಿದ್ದಾರೆ’ ಎಂದು ಆರೋಪಿಸಿದರು.

ಕೆಲವರು ‘ಜೈ ಶ್ರೀರಾಮ’ ಘೋಷಣೆ ಕೂಗುತ್ತಾ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಆದರೆ ಅವರು ಮುನಿಗಳಲ್ಲ’ ಎಂದು ಅಳ್ವಿ ಅವರು ಹೇಳಿದ್ದರು.ಇತ್ತೀಚೆಗೆ ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್‌ ಅವರು ಹಿಂದುತ್ವ ಸಂಘಟನೆ ಕುರಿತು ನೀಡಿದ್ದ ಹೇಳಿಕೆಯೂ ವಿವಾದಕ್ಕೆ ಕಾರಣವಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.