ADVERTISEMENT

ಋಷಿಕೇಶ: ಸುರಂಗದಿಂದ ಹೊರಬಂದ ಎಲ್ಲಾ ಕಾರ್ಮಿಕರು ಆರೋಗ್ಯವಾಗಿದ್ದಾರೆ– ಏಮ್ಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ನವೆಂಬರ್ 2023, 4:58 IST
Last Updated 30 ನವೆಂಬರ್ 2023, 4:58 IST
<div class="paragraphs"><p>ಸಿಲ್ಕ್ಯಾರಾ ಸುರಂಗದಿಂದ ರಕ್ಷಿಸಲ್ಪಟ್ಟ ಕಾರ್ಮಿಕರನ್ನು ರಿಷಿಕೇಶದ ಏಮ್ಸ್‌ಗೆ ಆಗಮಿಸುತ್ತಿದ್ದಂತೆ ಸ್ವಾಗತಿಸಲಾಯಿತು</p></div>

ಸಿಲ್ಕ್ಯಾರಾ ಸುರಂಗದಿಂದ ರಕ್ಷಿಸಲ್ಪಟ್ಟ ಕಾರ್ಮಿಕರನ್ನು ರಿಷಿಕೇಶದ ಏಮ್ಸ್‌ಗೆ ಆಗಮಿಸುತ್ತಿದ್ದಂತೆ ಸ್ವಾಗತಿಸಲಾಯಿತು

   

ಪಿಟಿಐ ಚಿತ್ರ

ಋಷಿಕೇಶ: ಸಿಲ್ಕ್ಯಾರಾ ಸುರಂಗದಿಂದ ಸುರಕ್ಷಿತವಾಗಿ ಹೊರಬಂದ 41 ಮಂದಿ ಕಾರ್ಮಿಕರಿಗೆ ಋಷಿಕೇಶದ ಏಮ್ಸ್‌ನಲ್ಲಿ ವೈದ್ಯಕೀಯ ತಪಾಸಣೆ ಮಾಡಲಾಗುತ್ತಿದೆ. ಕಾರ್ಮಿಕರಿಗೆ ಪ್ರಾಥಮಿಕ ತಪಾಸಣೆ ಮಾಡಲಾಗಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ, ಅವರನ್ನು ಯಾವಾಗ ಮನೆಗೆ ವಾಪಸ್‌ ಕಳುಹಿಸಬಹುದು ಎನ್ನುವ ಬಗ್ಗೆ ಇಂದು ನಿರ್ಧಾರವಾಗಲಿದೆ ಎಂದು ಏಮ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಮತ್ತು ಸಿಇಒ ಮೀನು ಸಿಂಗ್‌ ಹೇಳಿದ್ದಾರೆ.

ADVERTISEMENT

‘ಎಲ್ಲರೂ ಸ್ವಸ್ಥರಾಗಿದ್ದಾರೆ, ಅವರನ್ನು ರೋಗಿಗಳು ಎಂದು ಕರೆಯಲು ಇಷ್ಟಪಡುವುದಿಲ್ಲ. ಅವರ ರಕ್ತದೊತ್ತಡ, ಜೀವಸತ್ವಗಳು, ಉಸಿರಾಟ ಎಲ್ಲವೂ ಸಹಜವಾಗಿಯೇ ಇದೆ. ಅವುಗಳ ಎಲೆಕ್ಟ್ರೋಲೈಟ್‌ಗಳು ಮತ್ತು ಇತರ ರಕ್ತದ ನಿಯತಾಂಕಗಳನ್ನು ನೋಡಲು ಕೆಲವು ಪ್ರಾಥಮಿಕ ತಪಾಸಣೆಗಳನ್ನು ಮಾಡಿದ್ದೇವೆ. ವರದಿ ಶೀಘ್ರದಲ್ಲೇ ಬರಲಿದೆ. ಅಲ್ಲದೆ ಹೃದಯದ ಆರೋಗ್ಯವನ್ನು ಪರೀಕ್ಷಿಸಲು ಇಸಿಜಿಯನ್ನು ಸಹ ಮಾಡುತ್ತೇವೆ’ ಮೀನು ತಿಳಿಸಿದ್ದಾರೆ.

ಕಾರ್ಮಿಕರ ಮಾನಸಿಕ ಆರೋಗ್ಯವನ್ನೂ ಪ್ರಾಥಮಿಕವಾಗಿ ಪರೀಕ್ಷಿಸಿದ್ದು, ಆರೋಗ್ಯವಾಗಿಯೇ ಇದ್ದಾರೆ. ಇದರ ಜತೆಗೆ ಮುಂದಿನ ದಿನಗಳಲ್ಲಿ ಈ ಘಟನೆ ಮಾನಸಿಕವಾಗಿ ಪರಿಣಾಮವನ್ನುಂಟು ಮಾಡಲಿದೆಯೇ ಎನ್ನುವ ಬಗ್ಗೆಯೂ ನಿಗಾ ಇರಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.