ನವದೆಹಲಿ: ಓಮೈಕ್ರಾನ್ ಒಳಗೊಂಡಂತೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಮುನ್ನೆಚ್ಚರಿಕೆ ಡೋಸ್ (ಮೂರನೇ ಅಥವಾ ಬೂಸ್ಟರ್ ಡೋಸ್) ಲಸಿಕೆ ಅಭಿಯಾನವನ್ನು ಇಂದಿನಿಂದ (ಜ.10) ಆರಂಭಿಸಲಾಗಿದೆ.
ಆರೋಗ್ಯ ಹಾಗೂ ಮುಂಚೂಣಿಯ ಕಾರ್ಯಕರ್ತರು ಮತ್ತು60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಲಭ್ಯವಿರುತ್ತದೆ. ಆರೋಗ್ಯ ಸಮಸ್ಯೆ ಇರುವ 60 ವರ್ಷ ಮೇಲ್ಪಟ್ಟವರು ವೈದ್ಯರ ಶಿಫಾರಸಿನ ಮೇರೆಗೆ ಬೂಸ್ಟರ್ ಡೋಸ್ ಹಾಕಿಸಿಕೊಳ್ಳಬೇಕಾಗುತ್ತದೆ.
ಯಾರು ಅರ್ಹರು?
* ಆರೋಗ್ಯ ಹಾಗೂ ಮುಂಚೂಣಿಯ ಕಾರ್ತಕರ್ತರು ಮತ್ತು 60 ವರ್ಷ ಮೇಲ್ಪಟ್ಟವರು (ಆರೋಗ್ಯ ಸಮಸ್ಯೆ ಉಳ್ಳವರು).
*ಎರಡನೇ ಡೋಸ್ ಹಾಕಿಸಿದ ದಿನಾಂಕದ ಬಳಿಕ 9 ತಿಂಗಳು (39 ವಾರ) ಪೂರೈಸಿದವರು ಅರ್ಹರಾಗಿರುತ್ತಾರೆ.
*ಈ ಹಿಂದೆ ಪಡೆದ ಅದೇ ಲಸಿಕೆಯನ್ನು ನೀಡಲಾಗುತ್ತದೆ.
*ಸದ್ಯಕ್ಕೆ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ಮಾತ್ರ ಲಭ್ಯ.
ನೋಂದಣಿ ಹೇಗೆ?
*ಫಲಾನುಭವಿಗಳು ಕೋ-ವಿನ್ ಪೋರ್ಟಲ್ (https://www.cowin.gov.in/) ನೆರವಿನಿಂದ ಬುಕ್ಕಿಂಗ್ ಕಾಯ್ದಿರಿಸುವ ಅವಕಾಶ ಇರುತ್ತದೆ.
*ಮೂರನೇ ಡೋಸ್ ಲಸಿಕೆ ಪಡೆಯಲು ಹೊಸದಾಗಿ ನೋಂದಣಿ ಮಾಡಬೇಕಾಗಿಲ್ಲ.
*ಈಗಾಗಲೇ ಕೋ-ವಿನ್ ಪೋರ್ಟಲ್‌ನಲ್ಲಿ ಮೊಬೈಲ್ ಸಂಖ್ಯೆ ಮೂಲಕ ನೋಂದಣಿ ಮಾಡಿರುವ ಅದೇ ಖಾತೆ ಮೂಲಕ ಮುನ್ನೆಚ್ಚರಿಕೆ ಡೋಸ್ ಪಡೆಯಬಹುದು.
* ಫಲಾನುಭವಿಗಳಿಗೆ ಕೋ-ವಿನ್ ಪೋರ್ಟಲ್‌ನಿಂದ ಸಂದೇಶ ರವಾನೆಯಾಗುತ್ತದೆ.
*ನಿಮ್ಮ ಖಾತೆಯಲ್ಲೂ 'Precautionary Dose' ಪ್ರತಿಫಲಿಸುತ್ತದೆ.
*ಎರಡನೇ ಡೋಸ್ ಪಡೆದ ಬಳಿಕ ಮೂರನೇ ಡೋಸ್ ಪಡೆಯಲು ಇನ್ನು ಎಷ್ಟು ದಿನಗಳು ಬಾಕಿ ಉಳಿದಿವೆ ಎಂಬುದು ಕೂಡ ಕಾಣಿಸಲಿದೆ.
*ನೇರವಾಗಿ ಕೇಂದ್ರಗಳಿಗೆ ತೆರಳಿಯೂ ಲಸಿಕೆ ಪಡೆದುಕೊಳ್ಳಬಹುದು.
*ಎಲ್ಲ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ಒದಗಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
* ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಮುನ್ನೆಚ್ಚರಿಕೆ ಡೋಸ್ ವಿವರ ನಮೂದಿಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.