ವಯನಾಡ್ ಜಿಲ್ಲೆಯ ಮುಂಡಕ್ಕೈ, ಚೂರಲ್‌ಮಲ, ಅಟ್ಟಮಲ, ನೂಲ್‌ಪುಳ ಪ್ರದೇಶದಲ್ಲಿ ಜನರು ಮುಂಜಾವಿನ ಸವಿ ನಿದ್ದೆಯಲ್ಲಿದ್ದಾಗ, ಆರಂಭಿಕ ಭೂಕುಸಿತ ನಸುಕಿನ 2ರ ಸುಮಾರಿಗೆ ಘಟಿಸಿತು
ನಂತರದ ಭೂಕುಸಿತಗಳು 4.10ರ ಮುಂಜಾವಿನಲ್ಲಿ ಸಂಭವಿಸಿದವು. ಭೂಕುಸಿತದ ಜತೆಗೆ ರಕ್ಕಸ ಅಲೆಯಾಗಿ ಮಳೆ ನುಗ್ಗಿತು
ದುರಂತ ಸಂಭವಿಸಿರುವ ಈ ಸ್ಥಳಗಳು ಬೆಟ್ಟಗುಡ್ಡಗಳ ಪ್ರಾಕೃತಿಕ ಸೌಂದರ್ಯ, ಚಹಾ ತೋಟಗಳಿಂದಾಗಿ ಪ್ರವಾಸಿಗರ ನೆಚ್ಚಿನ ತಾಣಗಳಾಗಿದ್ದವು. ಇವುಗಳ ಸುತ್ತಮುತ್ತ ಹಲವು ಹೋಂಸ್ಟೇ ಮತ್ತು ರೆಸಾರ್ಟ್‌ಗಳೂ ಇವೆ
ಭೀಕರ ಭೂಕುಸಿತದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ಭಾರತೀಯ ಸೇನೆಯ ನೆರವನ್ನು ಕೇರಳ ಸರ್ಕಾರ ಕೋರಿತು.
ದುರಂತದ ಮಾಹಿತಿ ಲಭಿಸಿದ ಒಂದು ತಾಸಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳ 300 ಮಂದಿಯ ರಕ್ಷಣಾ ತಂಡ ಮೊದಲು ಸ್ಥಳ ತಲುಪಿ, ರಕ್ಷಣಾ ಕಾರ್ಯಾಚರಣೆ ಆರಂಭಿಸಿತು
ನೆಲಸಮವಾದ ಮನೆಗಳ ಅವಶೇಷಗಳಡಿ ಹೊಳೆಯಂತೆ ಹರಿಯುತ್ತಿದ್ದ ಪ್ರವಾಹದ ನೀರಿನ ನಡುವೆ ಸಿಲುಕಿ ಮೃತಪಟ್ಟವರ ದೇಹಗಳನ್ನು ಹೊರತೆಗೆಯುತ್ತಾ ಹೋದರು. ಮೊದಲಿಗೆ ಗಾಯಾಳುಗಳನ್ನು ರಕ್ಷಿಸಿ, ವಯನಾಡ್ ಆಸ್ಪತ್ರೆಗೆ ದಾಖಲಿಸಲಾಯಿತು
ಅವಶೇಷಗಳಡಿ ಸಿಲುಕಿ ಬದುಕಲು ಹೋರಾಡುತ್ತಿದ್ದವರನ್ನು ಪತ್ತೆಹಚ್ಚಿ, ರಕ್ಷಿಸಲು ಸೇನೆಯಲ್ಲಿ ವಿಶೇಷ ತರಬೇತಿ ಪಡೆದಿರುವ ಬೆಲ್ಜಿಯನ್ ಮ್ಯಾಲಿನ್‌ವಾ, ಲ್ಯಾಬ್ರಡಾರ್, ಜರ್ಮನ್ ಶೆಫರ್ಡ್ ತಳಿಯ ಶ್ವಾನ ದಳ ಬಳಸಿಕೊಳ್ಳಲಾಯಿತು
ತಕ್ಷಣಕ್ಕೆ ಘಟನಾ ಸ್ಥಳ ತಲುಪಲು, ಗಾಯಾಳುಗಳನ್ನು ರಕ್ಷಿಸಲು ವಾಯುಪಡೆಯ ಎರಡು ಹೆಲಿಕಾಪ್ಟರ್‌ಗಳು ಮತ್ತು ಕೆಲವು ಉಪಕರಣಗಳನ್ನು ಬಳಸಿಕೊಳ್ಳಲಾಯಿತು
ಕೇರಳ ಸರ್ಕಾರವು, ಸ್ಥಳೀಯ ಸ್ವ ಆಡಳಿತ ಇಲಾಖೆಯ ಪ್ರಧಾನ ನಿರ್ದೇಶಕ ಸೀರಂ ಸಾಂಬಶಿವ ರಾವ್ ಅವರನ್ನು ವಯನಾಡ್ ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆ ಮತ್ತು ಪರಿಹಾರ ಕಾರ್ಯಗಳ ಸಮನ್ವಯಕ್ಕೆ ವಿಶೇಷ ಅಧಿಕಾರಿಯಾಗಿ ನೇಮಿಸಿತು
45 ಪರಿಹಾರ ಕೇಂದ್ರಗಳಿಗೆ ಸುಮಾರು 3,000 ಸಂತ್ರಸ್ತರನ್ನು ಸ್ಥಳಾಂತರ ಮಾಡಲಾಗಿದೆ
ದುರಂತದಲ್ಲಿ ಮಡಿದವರಿಗೆ ತಲಾ ₹2 ಲಕ್ಷದಂತೆ ಪರಿಹಾರವನ್ನು ಅವರ ಅವಲಂಬಿತರಿಗೆ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.
ಈ ದುರಂತದ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ರಾಜ್ಯದಲ್ಲಿ ಎರಡು ದಿನ (ಜುಲೈ 30 ಮತ್ತು 31) ಶೋಕ ಘೋಷಿಸಿದ್ದು, ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಲಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.