ಲಖನೌ: ಅಪಹರಣ ಪ್ರಕರಣದಲ್ಲಿ ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿರುವ ಮಾಜಿ ಸಂಸದ ಧನಂಜಯ್ ಸಿಂಗ್ ಅವರಿಗೆ ಅಲಹಾಬಾದ್ ಹೈಕೋರ್ಟ್ ಇಂದು (ಶನಿವಾರ) ಜಾಮೀನು ಮಂಜೂರು ಮಾಡಿದೆ. ಆದರೆ, ಶಿಕ್ಷೆಗೆ ತಡೆ ನೀಡಲು ಕೋರ್ಟ್ ನಿರಾಕರಿಸಿದೆ.
ಇದೇ ಪ್ರಕರಣ ಸಂಬಂಧ ಮಾರ್ಚ್ 6ರಂದು ಧನಂಜಯ್ ಸಿಂಗ್‌ಗೆ ಜೌನ್‌ಪುರ ಜಿಲ್ಲೆಯಲ್ಲಿರುವ ಸಂಸದ/ಶಾಸಕರ ನ್ಯಾಯಾಲಯವು ಏಳು ವರ್ಷ ಕಾರಾಗೃಹ ಶಿಕ್ಷೆ ಮತ್ತು ₹75,000 ದಂಡ ವಿಧಿಸಿ ಆದೇಶ ಪ್ರಕಟಿಸಿತ್ತು.
ಆರೋಪವನ್ನು ಅಲ್ಲಗಳೆದಿದ್ದ ಸಿಂಗ್, ತಮ್ಮ ವಿರುದ್ಧದ ತೀರ್ಪನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ತಿಳಿಸಿದ್ದರು.
ಮೇ 2020ರಲ್ಲಿ ನಮಾಮಿ ಗಂಗಾ ಯೋಜನೆಯ ಮ್ಯಾನೇಜರ್ ಅಭಿನವ್ ಸಿಂಘಾಲ್ ಅವರನ್ನು ಅಪಹರಣ ಮಾಡಿದ ಮತ್ತು ಅವರಿಗೆ ಬೆದರಿಕೆಯೊಡ್ಡಿದ ಆರೋಪದ ಮೇಲೆ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಧನಂಜಯ್ ವಿರುದ್ಧ ಇನ್ನೂ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.