ಎರ್ನಾಕುಳಂ: ಟೈಮ್ ನಿಯತಕಾಲಿಕದ ಮುಖಪುಟದಲ್ಲಿ ಕೇಂದ್ರ ಸಚಿವ ಅಲ್ಫೋನ್ಸ್ ಕಣ್ಣಂತ್ತಾನಂ! 1994 ಡಿಸೆಂಬರ್ 5ರಂದು ಪ್ರಕಟವಾದ ಟೈಮ್ನಿಯತಕಾಲಿಕದ ಮುಖಪುಟದಲ್ಲಿ ತನ್ನ ಚಿತ್ರವಿರುವ ಪೋಸ್ಟ್‌ನ್ನು ಕಣ್ಣಂತ್ತಾನಂ ಫೇಸ್‍ಬುಕ್‍ನಲ್ಲಿ ಶೇರ್ ಮಾಡಿದ್ದಾರೆ.
ಈ ಚಿತ್ರಪೋಸ್ಟ್ ಆದ ಕೆಲವೇ ಕ್ಷಣಗಳಲ್ಲಿ ಇದು ಫೋಟೊಶಾಪ್ ಕೈಚಳಕ ಎಂದು ನೆಟ್ಟಿಗರು ಪತ್ತೆ ಹಚ್ಚಿದ್ದಾರೆ.
ಅಮೆರಿಕದಲ್ಲಿ ಭರವಸೆ ಮೂಡಿಸಿದ 40 ವರ್ಷಕ್ಕಿಂತ ಕೆಳಗಿನ 50 ನಾಯಕರ ಬಗ್ಗೆ (TIME's roster of America's most promising leaders age 40 and Under) ಇರುವ ಲೇಖನವನ್ನು ಟೈಮ್ 1994ಡಿಸೆಂಬರ್ 5ರ ಸಂಚಿಕೆಯಲ್ಲಿಪ್ರಕಟಿಸಿತ್ತು.
ಆದರೆ ಇದನ್ನು ಫೋಟೊಶಾಪ್ ಮೂಲಕ ಎಡಿಟ್ ಮಾಡಿ ಕಣ್ಣಂತ್ತಾನಂ ಅವರ ಚಿತ್ರ ಬಳಸಲಾಗಿದೆ. ಅಷ್ಟೇ ಅಲ್ಲದೆ50 For the Future ಎಂಬ ಮ್ಯಾಗಜಿನ್‍ನ ಮುಖಪುಟದ ಲೇಖನದ ಶೀರ್ಷಿಕೆಯನ್ನು The Global 100 ಎಂದು ತಿರುಚಿ TIME's roster of young leadrs for the new millenium ಎಂದು ಬರೆಯಲಾಗಿದೆ.
ಕಣ್ಣಂತ್ತಾನಂ ಅವರ ಪೋಸ್ಟ್ ಕೆಳಗೆಟೈಮ್ ಮ್ಯಾಗಜಿನ್‍ಕವರ್ ಪೇಜ್ ಲಿಂಕ್‌ನ್ನು ಕಾಮೆಂಟಿಸುವ ಮೂಲಕ ನೆಟ್ಟಿಗರು ಫೋಟೊಶಾಪ್ಕೈಚಳಕವನ್ನು ಟ್ರೋಲ್ ಮಾಡಿದ್ದಾರೆ.
ಟೈಮ್ ಮ್ಯಾಗಜಿನ್ ಮುಖಪುಟದಲ್ಲಿರುವ ಕಣ್ಣಂತ್ತಾನಂ ಚಿತ್ರ 2019 ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಬಳಸಿದ ಚಿತ್ರವಾಗಿದೆ.
ಅಂದಹಾಗೆಕಣ್ಣಂತ್ತಾನಂ ಅವರಿಗೆ ಈಗ 65 ವರ್ಷ.1994ರಲ್ಲಿ ಪ್ರಕಟವಾದ ಈ ಮ್ಯಾಗಜಿನ್‍ನಲ್ಲಿ ಅವರ ಇತ್ತೀಚಿನ ಭಾವಚಿತ್ರ ಪ್ರಕಟವಾಗಿದ್ದು ಹೇಗೆ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. 65 ವರ್ಷದವರನ್ನು ಯಂಗ್ ಲೀಡರ್ ಅಂದವರು ಯಾರು ಎಂಬುದು ಇನ್ನೊಂದು ಪ್ರಶ್ನೆ.
ಒಟ್ಚಿನಲ್ಲಿ ಕೇರಳದ ಬಿಜೆಪಿ ಅಭ್ಯರ್ಥಿಯಾಗಿರುವ ಕಣ್ಣಂತ್ತಾನಂ ಈ ರೀತಿ ಎಡವಟ್ಟುಗಳನ್ನು ಮಾಡಿಕೊಂಡು ಸದಾ ಸುದ್ದಿಯಾಗುತ್ತಿದ್ದಾರೆ.
ನ್ಯಾಯಾಲಯದಲ್ಲಿಯೂ ಮತ ಯಾಚನೆ
ಆಸ್ಪತ್ರೆ ಮತ್ತು ನ್ಯಾಯಾಲಯಗಳಲ್ಲಿ ಚುನಾವಣಾ ಪ್ರಚಾರ ಮಾಡುವಂತಿಲ್ಲ. ಆದರೆನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಣ್ಣಂತ್ತಾನಂಮಾರ್ಚ್ 29ರಂದು ಎರ್ನಾಕುಳಂನ ಪರಾವೂರ್ ಹೆಚ್ಚುವರಿ ನ್ಯಾಯಾಲಯದ ಒಳಗೆ ಹೋಗಿಮತಯಾಚಿಸಿದ್ದರು.
ಲೋಕಸಭಾ ಕ್ಷೇತ್ರದ ಬಗ್ಗೆಯೂ ಗೊತ್ತಿಲ್ಲ!
ಇದಕ್ಕಿಂತ ಮುಂಚೆ ಮಾರ್ಚ್ 23ರಂದುಕೊಚ್ಚಿ ವಿಮಾನ ನಿಲ್ದಾಣದಲ್ಲಿಳಿದು ನಾಟಕೀಯವಾಗಿಕೆಎಸ್‍ಆರ್‌ಟಿಸಿ ಬಸ್ಸು ಏರಿ ಆಲುವಾದಲ್ಲಿ ಚುನಾವಣಾ ಪ್ರಚಾರ ಆರಂಭಿಸಲು ಹೊರಟಿದ್ದರು ಕಣ್ಣಂತ್ತಾನಂ.ಬಸ್ ಪ್ರಯಾಣದ ನಡುವೆ ಯಾವುದೋ ಒಂದುಸ್ಟಾಪ್‍ನಲ್ಲಿ ಬಸ್ ಇಳಿದ ಕಣ್ಣಂತ್ತಾನಂ ಮತದಾರರಲ್ಲಿ ಮತಯಾಚನೆ ಮಾಡಿದ್ದರು.ಆದರೆ ಕಣ್ಣಂತ್ತಾನಂ ಬಸ್ ಇಳಿದ ಜಾಗ ಚಾಲಕ್ಕುಡಿ ಆಗಿತ್ತು.ಅದು ಕಣ್ಣಂತ್ತಾನಂ ಕಣಕ್ಕಿಳಿದಿರುವ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವುದಿಲ್ಲ. ನಿಮ್ಮಚುನಾವಣಾ ಕ್ಷೇತ್ರ ಬಗ್ಗೆಯೇ ನಿಮಗೆ ಮಾಹಿತಿ ಇಲ್ಲವೇ? ಎಂದು ಮಾಧ್ಯಮದವರು ಕೇಳಿದಾಗ, ನೆಡುಂಬಾಶ್ಶೇರಿ ವಿಮಾನ ನಿಲ್ದಾಣ ಬೇರೆ ಲೋಕಸಭಾ ಕ್ಷೇತ್ರದಲ್ಲಿರುವುದಕ್ಕೆ ನಾನೇನು ತಪ್ಪು ಮಾಡಿದೆ ಎಂದಾಗಿತ್ತು ಕಣ್ಣಂತ್ತಾನಂ ಅವರ ಉತ್ತರ.
ಈ ಹಿಂದೆ ಪುಲ್ವಾಮಾ ದಾಳಿಯಲ್ಲಿ ಹುತಾತ್ಮ ಯೋಧನ ಅಂತ್ಯ ಸಂಸ್ಕಾರದ ವೇಳೆ ಸೆಲ್ಫಿ ಕ್ಲಿಕ್ಕಿಸಿ ಕಣ್ಣಂತ್ತಾನಂ ವಿವಾದಕ್ಕೀಡಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.