ADVERTISEMENT

ಆಂಧ್ರಪ್ರದೇಶ: ಅಮರಾವತಿ ರಾಜಧಾನಿ ಯೋಜನೆ ಮತ್ತೆ ಮುನ್ನೆಲೆಗೆ

ಟಿಡಿಪಿಗೆ ಭಾರಿ ಬಹುಮತ ದೊರೆತಿರುವುದರಿಂದ ಯೋಜನೆಗೆ ಮರುಜೀವ ಸಾಧ್ಯತೆ

ಪಿಟಿಐ
Published 7 ಜೂನ್ 2024, 15:49 IST
Last Updated 7 ಜೂನ್ 2024, 15:49 IST
<div class="paragraphs"><p><strong>ಅಮರಾವತಿ</strong></p></div>

ಅಮರಾವತಿ

   

ಅಮರಾವತಿ: ಆಂಧ್ರಪ್ರದೇಶ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ತೆಲುಗು ದೇಶಂ ಪಾರ್ಟಿ (ಟಿಡಿಪಿ), ಬಿಜೆಪಿ ಮತ್ತು ಜನಸೇನಾ ಪಕ್ಷವನ್ನು ಒಳಗೊಂಡ ಮೈತ್ರಿಕೂಟ ಎನ್‌ಡಿಎ ಭಾರಿ ಬಹುಮತದ ಗೆಲುವು ಸಾಧಿಸುತ್ತಿದ್ದಂತೆಯೇ, ರಾಜಧಾನಿ ಅಮರಾವತಿ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆ ಮತ್ತೆ ಮುನ್ನೆಲೆಗೆ ಬಂದಿದೆ.

ಈ ಹಿಂದಿನ ವೈ.ಎಸ್‌.ಆರ್. ಕಾಂಗ್ರೆಸ್‌ ಪಕ್ಷ ಈ ಯೋಜನೆಯನ್ನು ಕೈಬಿಟ್ಟಿತ್ತು. ಈಗ, ಟಿಡಿಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿರುವ ಕಾರಣ, ಈ ಯೋಜನೆಗೆ ಮರುಜೀವ ಸಿಗುವ ಸಾಧ್ಯತೆ ಇದೆ.

ADVERTISEMENT

ವಿಭಜನೆ ನಂತರ ಅಸ್ತಿತ್ವಕ್ಕೆ ಬಂದ ಆಂಧ್ರಪ್ರದೇಶದ ಮೊದಲ ಮುಖ್ಯಮಂತ್ರಿಯಾಗಿ 2014ರಿಂದ 2019ರ ವರೆಗೆ ಅಧಿಕಾರದಲ್ಲಿದ್ದ ಟಿಡಿಪಿ ವರಿಷ್ಠ ಎನ್‌.ಚಂದ್ರಬಾಬು ನಾಯ್ಡು, ಅಮರಾವತಿಯನ್ನು ರಾಜ್ಯದ ರಾಜಧಾನಿಯಾಗಿ ಘೋಷಿಸಿದ್ದರು.

ವಿಜಯವಾಡ ಮತ್ತು ಗುಂಟೂರು ನಗರಗಳ ನಡುವೆ ಇರುವ ಅಮರಾವತಿಯನ್ನು ಪರಿಸರಸ್ನೇಹಿ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಹೊಂದಿದ ನಗರವನ್ನಾಗಿ ರೂಪಿಸುವುದು ನಾಯ್ಡು ಅವರ ಯೋಜನೆಯಾಗಿತ್ತು.

ಈ ಎರಡು ನಗರಗಳ ನಡುವೆ 29 ಗ್ರಾಮಗಳಿವೆ. ಅಮರಾವತಿ ನಗರ ಅಭಿವೃದ್ಧಿಗಾಗಿ ಆ ಪ್ರದೇಶ ವ್ಯಾಪ್ತಿಯಲ್ಲಿ 30 ಸಾವಿರ ಎಕರೆಯಷ್ಟು ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು.2015ರ ಅಕ್ಟೋಬರ್ 22ರಂದು ನಡೆದಿದ್ದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ,  ತೆಲಂಗಾಣದ ಆಗಿನ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್‌ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.