ADVERTISEMENT

ನಿರ್ಲಕ್ಷ್ಯದಿಂದ ಸಾವು: ವೈದ್ಯರ ಶಿಕ್ಷೆ ಪ್ರಮಾಣ ಇಳಿಕೆ ಪ್ರಸ್ತಾವ

ಪಿಟಿಐ
Published 20 ಡಿಸೆಂಬರ್ 2023, 23:30 IST
Last Updated 20 ಡಿಸೆಂಬರ್ 2023, 23:30 IST
   

ನವದೆಹಲಿ: ಚಿಕಿತ್ಸೆ ವೇಳೆ ನಿರ್ಲಕ್ಷ್ಯದ ಕಾರಣದಿಂದ ರೋಗಿಯ ಸಾವು ಸಂಭವಿಸಿದ ಸಂದರ್ಭದಲ್ಲಿ ವೈದ್ಯರಿಗೆ ವಿಧಿಸುತ್ತಿದ್ದ ಜೈಲು ಶಿಕ್ಷೆ ಅವಧಿಯನ್ನು ಕಡಿಮೆಗೊಳಿಸುವ ಅಂಶವನ್ನು ಲೋಕಸಭೆಯಲ್ಲಿ ಬುಧವಾರ ಅಂಗೀಕರಿಸಲಾದ ಭಾರತೀಯ ನ್ಯಾಯ (ಎರಡನೆಯ) ಸಂಹಿತೆ ತಿದ್ದುಪಡಿ ಮಸೂದೆಯು ಒಳಗೊಂಡಿದೆ.

ನಿರ್ಲಕ್ಷ್ಯದಿಂದಾಗಿ ರೋಗಿಯು ಮೃತಪಟ್ಟರೆ ಶಿಕ್ಷಾರ್ಹ ಹತ್ಯೆ ಎಂದು ಪರಿಗಣಿಸಲಾಗುತ್ತದೆ. ತಿದ್ದುಪಡಿ ಮಸೂದೆಯು ಈ ಜೈಲು ಶಿಕ್ಷೆಯನ್ನು ಎರಡು ವರ್ಷಗಳಿಗೆ ಇಳಿಸುವ ಅವಕಾಶವನ್ನು ಒಳಗೊಂಡಿದೆ.

ಮಸೂದೆ ಮಂಡಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಈ ವಿಚಾರವಾಗಿ ಭಾರತೀಯ ವೈದ್ಯಕೀಯ ಸಂಘವು ತಮಗೆ ಪತ್ರ ಬರೆದು, ಅಹವಾಲು ಸಲ್ಲಿಸಿತ್ತು ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.