ಲಖನೌ: ಕಂಪನಿಯೊಂದರ ನೋಂದಣಿ ವೇಳೆ ರಾಹುಲ್ ಗಾಂಧಿ ಅವರು ತಾವು ಬ್ರಿಟನ್ ಪೌರತ್ವ ಹೊಂದಿರುವುದಾಗಿ ದಾಖಲೆ ನೀಡಿದ್ದಾರೆ ಎಂದೂ, ಶೈಕ್ಷಣಿಕ ದಾಖಲೆಗಳಲ್ಲಿ ರಾಹುಲ್ ಗಾಂಧಿ ಅವರ ಹೆಸರಿಲ್ಲ ಎಂದುಆರೋಪಿಸಿ ಅಮೇಥಿಯ ಪಕ್ಷೇತರ ಅಭ್ಯರ್ಥಿಯೊಬ್ಬರು ಚುನಾವಣಾಧಿಕಾರಿಗೆ ದೂರು ನೀಡಿದ್ದು, ರಾಹುಲ್ ಅವರ ನಾಮಪತ್ರದ ಪರಿಶೀಲನೆ ಪ್ರಕ್ರಿಯೆಯನ್ನು ಅಲ್ಲಿನ ಚುನಾವಣಾಧಿಕಾರಿ ಮುಂದೂಡಿದ್ದಾರೆ. ಏ.22ರಂದು ಪರಿಶೀಲನೆ ನಡೆಸುವುದಾಗಿ ಚುನಾವಣಾಧಿಕಾರಿ ರಾಮ್ ಮನೋಹರ್ ಮಿಶ್ರಾ ಆದೇಶ ಹೊರಡಿಸಿದ್ದಾರೆ.
‘ರಾಹುಲ್ ಗಾಂಧಿ ಅವರ ದಾಖಲೆಗಳಿಗೆ ಸಂಬಂಧಿಸಿದಂತೆ ಬಂದಿರುವ ದೂರುಗಳಿಗೆ ವಿವರಣೆ ನೀಡಲು ರಾಹುಲ್ ಅವರ ಪ್ರತಿನಿಧಿ ರಾಹುಲ್ ಕೌಶಿಕ್ ಅವರು ಏ.22ರ ಬೆಳಗ್ಗೆ 10.30ರ ವರೆಗೆ ಸಮಯ ಪಡೆದಿದ್ದಾರೆ. ಅಲ್ಲಿಯ ವರೆಗೆ ನಾಮಪತ್ರ ಪರಿಶೀಲನೆ ನಡೆಸದಿರಲು ನಿರ್ಧರಿಸಲಾಗಿದೆ,’ ಎಂದು ರಾಮ್ ಚುನಾವಣಾಧಿಕಾರಿಮನೋಹರ್ ಮಿಶ್ರಾಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಅಮೇಠಿ ಕ್ಷೇತ್ರದಿಂದ ಸಲ್ಲಿಸಿರುವ ನಾಮಪತ್ರದ ಜತೆಗೆ ಕೊಟ್ಟಿರುವ ಪ್ರಮಾಣಪತ್ರದಲ್ಲಿ ಅವರ ಪೌರತ್ವ ಮತ್ತು ವಿದ್ಯಾರ್ಹತೆ ಬಗೆಗಿನ ವಿವರಗಳು ತಾಳೆಯಾಗುವುದಿಲ್ಲ ಎಂದು ಪಕ್ಷೇತರ ಅಭ್ಯರ್ಥಿ ಧ್ರುವಲಾಲ್ ಎಂಬವರು ಶನಿವಾರ ಆಕ್ಷೇಪ ಎತ್ತಿದ್ದಾರೆ.ರಾಹುಲ್ ಗಾಂಧಿ ಅವರ ಉಮೇಧುವಾರಿಕೆಯನ್ನು ಆಕ್ಷೇಪಿಸಿ ನಾಲ್ಕು ಮಂದಿ ದೂರು ದಾಖಲಿಸಿದ್ದಾರೆ.
ರಾಹುಲ್ ಅವರು ಹೂಡಿಕೆ ಮಾಡಿದ್ದಾರೆ ಎನ್ನಲಾದ ಬ್ರಿಟನ್ ಕಂಪನಿಯೊಂದರ ದಾಖಲೆಯನ್ನು ಧ್ರುವಲಾಲ್ ಅವರ ವಕೀಲ ರವಿಪ್ರಕಾಶ್ ಮಾಧ್ಯಮದ ಮುಂದೆ ಪ್ರದರ್ಶಿಸಿದ್ದಾರೆ. ರಾಹುಲ್ ಅವರು ಬ್ರಿಟನ್ ಪ್ರಜೆ ಎಂದು ಈ ದಾಖಲೆಯಲ್ಲಿ ಇದೆ.ಈ ಕಂಪನಿಯುಐದು ವರ್ಷ ಅಸ್ತಿತ್ವದಲ್ಲಿತ್ತು. ಕಂಪನಿಯು ಲಾಭ ಗಳಿಸಿರುವ ಸಾಧ್ಯತೆ ಇದೆ. ಹಾಗಿದ್ದರೂ ಪ್ರಮಾಣಪತ್ರದಲ್ಲಿ ಈ ಲಾಭದ ಉಲ್ಲೇಖ ಇಲ್ಲ ಎಂದೂ ಅವರು ಆರೋಪಿಸಿದ್ದಾರೆ.
‘ಇನ್ನೊಂದು ದೇಶದ ನಾಗರಿಕರು ಭಾರತದಲ್ಲಿ ಸ್ಪರ್ಧಿಸಲುಸಂವಿಧಾನದಲ್ಲಿ ಅವಕಾಶ ಕಲ್ಪಿಸಿಲ್ಲ,’ ಎಂದು ಪ್ರಕಾಶ್ ಹೇಳಿದ್ದಾರೆ.
ಅವರು ಯಾವ ಆಧಾರದ ಮೇಲೆ ಬ್ರಿಟಷ್ ಪೌರತ್ವ ಪಡೆದರು? ಹಾಗಿದ್ದೂ, ಭಾರತದ ನಾಗರಿಕತ್ವ ಸಿಕ್ಕಿದ್ದು ಹೇಗೆ? ಈ ವಿಚಾರದಲ್ಲಿ ಸ್ಪಷ್ಟನೆ ಸಿಗುವವ ವರೆಗೆ ಅವರ ನಾಮಪತ್ರವನ್ನು ಅಂಗೀಕರಿಸದಂತೆ ನಾನು ಚುನಾವಣಾಧಿಕಾರಿಗೆ ಮನವಿ ಮಾಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.
‘2003 ರಿಂದ 2009ರ ಅವಧಿಯಲ್ಲಿ ಬ್ರಿಟನ್ ಸಂಸ್ಥೆ ಹೊಂದಿದ್ದ ಆಸ್ತಿ ವಿವರವನ್ನು ರಾಹುಲ್ ಗಾಂಧಿ ನೀಡಿಲ್ಲ. ಇನ್ನೊಂದೆಡೆ ಅಫಿಡವಿಟ್‌ನಲ್ಲಿ ಸಲ್ಲಿಸಿರುವ ವಿದ್ಯಾರ್ಹತೆ ದಾಖಲೆಗಳಲ್ಲಿ ಹೊಂದಾಣಿಕೆಯಿಲ್ಲ. ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಅವರ ದಾಖಲೆಗಳಲ್ಲಿ ರಾಹುಲ್ ವಿನ್ಸಿ ಎಂದು ಇದೆ. ಆದರೆ, ರಾಹುಲ್ ಗಾಂಧಿ ಹೆಸರಲ್ಲಿ ಯಾವ ದಾಖಲೆಗಳೂ ಲಭ್ಯವಿಲ್ಲ. ರಾಹುಲ್ ವಿನ್ಸಿ ಮತ್ತು ರಾಹುಲ್ ಗಾಂಧಿ ಇಬ್ಬರೂ ಒಬ್ಬರೇ? ಅಥವಾ ಬೇರೆ ಬೇರೆಯವರೇ ಎಂಬುದು ನಮ್ಮ ಪ್ರಶ್ನೆ. ಹಾಗೇನಾದರೂ ಬೇರೆ ಬೇರೆಯಾಗಿದ್ದಲ್ಲಿ ರಾಹುಲ್ ಗಾಂಧಿ ಅವರು ತಮ್ಮ ವಿದ್ಯಾರ್ಹತೆಗೆ ಸಂಬಂಧಿಸಿದ ನೈಜ ದಾಖಲೆಗಳನ್ನು ಸಲ್ಲಿಸಬೇಕು,’ ಎಂಬುದು ನಮ್ಮ ಒತ್ತಾಯವಾಗಿದೆ ಎಂದಿದ್ದಾರೆ ಪ್ರಕಾಶ್.
ಈ ಆಕ್ಷೇಪಗಳಿಗೆ ಉತ್ತರಿಸಲು ರಾಹುಲ್ ಅವರ ವಕೀಲರು ಸಮಯ ಕೇಳಿದ್ದಾರೆ. ಸೋಮವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಅಮೇಠಿಯ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.