ADVERTISEMENT

ನಟ ಮುಕೇಶ್‌ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ

ದೂರು ದಾಖಲಿಸಿದ ನಟಿ; ಶಾಸಕ ಸ್ಥಾನಕ್ಕೆ ರಾಜೀನಾಮೆಗೆ ಹೆಚ್ಚಿದ ಒತ್ತಡ

ಪಿಟಿಐ
Published 28 ಆಗಸ್ಟ್ 2024, 16:26 IST
Last Updated 28 ಆಗಸ್ಟ್ 2024, 16:26 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ತಿರುವನಂತಪುರ: ಮಲಯಾಳ ಚಿತ್ರರಂಗದ ಪ್ರಮುಖ ನಟ ಮತ್ತು ಸಿಪಿಎಂ ಶಾಸಕ ಎಂ. ಮುಖೇಶ್ ವಿರುದ್ಧ ನಟಿಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪ ಮಾಡಿ ಪೊಲೀಸ್‌ ದೂರು ದಾಖಲಿಸಿರುವ ಕಾರಣ, ಮುಕೇಶ್‌ ಅವರ ರಾಜೀನಾಮೆಗೆ ಒತ್ತಡ ಹೆಚ್ಚುತ್ತಿದೆ. ಆದರೆ, ಪಕ್ಷವು ಈ ಬಗ್ಗೆ ಕ್ರಮಕ್ಕೆ ಮೊದಲು ಪ್ರಕರಣದ ತನಿಖೆಯ ಫಲಿತಾಂಶ ಹೊರಬರಲಿ ಎಂದು ಹೇಳಿದೆ.

ನಟಿಯೊಬ್ಬರ ದೂರಿನ ಆಧಾರದ ಮೇಲೆ ನಟ ಸಿದ್ದೀಕ್ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾದ ನಂತರ, ಎಡ ಪಕ್ಷದ ಸರ್ಕಾರವು ಶಾಸಕ ಮುಖೇಶ್ ಅವರ ಪ್ರಕರಣದಲ್ಲಿ ಎಚ್ಚರಿಕೆಯ ನಡೆ ಅನುಸರಿಸಿದಂತೆ ಕಾಣುತ್ತಿದೆ. ವಿಶೇಷ ಪೊಲೀಸ್ ತಂಡ ನಡೆಸುತ್ತಿರುವ ತನಿಖೆಯ ಫಲಿತಾಂಶದ ಮೇಲೆ ಮುಂದಿನ ಕ್ರಮ ಎನ್ನುವ ಸುಳಿವನ್ನು ಇಬ್ಬರು ಸಚಿವರು ನೀಡಿದ್ದಾರೆ.

ADVERTISEMENT

ಮುಕೇಶ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಪಿಎಂನ ಹಿರಿಯ ನಾಯಕ ಮತ್ತು ರಾಜ್ಯ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್, ‘ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯು, ನಟಿಯರ ಮೇಲೆ ನಟರು ನಡೆಸಿರುವ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಬಹಿರಂಗಪಡಿಸಿದ್ದು, ಈ ಬಗ್ಗೆ ರಾಜ್ಯ ಸರ್ಕಾರವು ಕಠಿಣ ಕ್ರಮ ತೆಗೆದುಕೊಂಡಿದೆ. ಈ ವರದಿಯು ಈಗ ಕೇರಳ ಹೈಕೋರ್ಟ್‌ ಮುಂದೆಯೂ ಇದೆ’ ಎಂದು ಹೇಳಿದ್ದಾರೆ.

‘ಸರಿಯಾದ ಮತ್ತು ಪಾರದರ್ಶಕ ತನಿಖೆ ಕೈಗೊಳ್ಳಲಾಗುವುದು. ತನಿಖೆಯ ಫಲಿತಾಂಶ ಆಧಾರದ ಮೇಲೆ ಮುಂದಿನ ಹೆಜ್ಜೆ ಇರಿಸಲಾಗುವುದು. ಹಾಗಾಗಿ ಯಾವುದೇ ಪೂರ್ವಗ್ರಹದ ತೀರ್ಮಾನ ತೆಗೆದುಕೊಳ್ಳುವ ಅಗತ್ಯವಿಲ್ಲ’ ಎಂದು ಬಾಲಗೋಪಾಲ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.