ADVERTISEMENT

ಬಿಹಾರದ ಕಾಂಗ್ರೆಸ್‌ ಶಾಸಕರು ಹೈದರಾಬಾದ್‌ಗೆ

ಪಿಟಿಐ
Published 4 ಫೆಬ್ರುವರಿ 2024, 16:15 IST
Last Updated 4 ಫೆಬ್ರುವರಿ 2024, 16:15 IST
   

ಪಟ್ನಾ: ಮೂವರು ಶಾಸಕರನ್ನು ಹೊರತುಪಡಿಸಿ ಬಿಹಾರದ ಕಾಂಗ್ರೆಸ್‌ನ ಎಲ್ಲ ಶಾಸಕರನ್ನು ಭಾನುವಾರ ಹೈದರಾಬಾದ್‌ಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ಹೇಳಿವೆ.

ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಖರೀದಿ ಮಾಡಬಹುದು ಎಂಬ ಭಯದಿಂದ ಈ ಕ್ರಮಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್‌ ಪಕ್ಷದ ಮೂಲಗಳು ತಿಳಿಸಿವೆ.

‘ಕಾಂಗ್ರೆಸ್‌ ಶಾಸಕರು ಪಕ್ಷ ತೊರೆಯುತ್ತಾರೆ ಎಂಬ ವಂದತಿ ಹರಡಿದೆ. ಆದರೆ, ಮತದಾರು ಕೋಪಗೊಂಡಿರುವುದರಿಂದ ಜೆಡಿಯು ಶಾಸಕರೇ ಒತ್ತಡಕ್ಕೆ ಒಳಗಾಗಿದ್ದಾರೆ’ ಎಂದು ಬಿಹಾರದ ಕಾಂಗ್ರೆಸ್‌ ಉಸ್ತುವಾರಿ ಮೋಹನ್‌ ಪ್ರಕಾಶ್‌ ತಿಳಿಸಿದರು.

ADVERTISEMENT

ಬಿಹಾರದ ಕಾಂಗ್ರೆಸ್‌ ಮುಖಂಡರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ರಾಜಕೀಯ ಬೆಳವಣಿಗೆಗ‌ಳ ಕುರಿತು ಮಾತುಕತೆ ನಡೆಸಿದ್ದಾರೆ. ಬಿಹಾರದಲ್ಲಿ ಕಾಂಗ್ರೆಸ್‌ನ 19 ಶಾಸಕರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.