ADVERTISEMENT

ಚಳಿಗಾಲ ಆರಂಭ: ಮುಚ್ಚಿದ ಕೇದಾರನಾಥ ದೇಗುಲದ ಬಾಗಿಲು

ಪಿಟಿಐ
Published 3 ನವೆಂಬರ್ 2024, 10:30 IST
Last Updated 3 ನವೆಂಬರ್ 2024, 10:30 IST
<div class="paragraphs"><p>ಕೇದರನಾಥ ದೇಗುಲ</p></div>

ಕೇದರನಾಥ ದೇಗುಲ

   

ಪಿಟಿಐ ಚಿತ್ರ

ಡೆಹರಾಡೂನ್‌: ಚಳಿಗಾಲ ಆರಂಭವಾದ ಕಾರಣ ವಿವಿಧ ಧಾರ್ಮಿಕ ಆಚರಣೆಗಳ ಬಳಿಕ ಕೇದಾರನಾಥ ದೇಗುಲದ ಬಾಗಿಲುಗಳನ್ನು ಇಂದು ಮುಚ್ಚಲಾಗಿದೆ. ಈ ವೇಳೆ 18 ಸಾವಿರಕ್ಕೂ ಹೆಚ್ಚು ಭಕ್ತರು ಸ್ಥಳದಲ್ಲಿದ್ದರು.

ADVERTISEMENT

ಇಂದು (ಭಾನುವಾರ) ಬೆಳಗಿನ ಜಾವ 4 ಗಂಟೆಗೆ ಧಾರ್ಮಿಕ ಆಚರಣೆಗಳು ಆರಂಭವಾಗಿ ಬೆಳಿಗ್ಗೆ 8.30ಕ್ಕೆ ದೇಗುಲದ ಬಾಗಿಲನ್ನು ಮುಚ್ಚಲಾಗಿದೆ ಎಂದು ಬದರಿನಾಥ –ಕೇದಾರನಾಥ ದೇಗುಲ ಸಮಿತಿ ಮಾಧ್ಯಮ ಉಸ್ತುವಾರಿ ಹರೀಶ್‌ ಗೌರ್‌ ತಿಳಿಸಿದ್ದಾರೆ.

ಈ ವರ್ಷ 16.5 ಲಕ್ಷ ಭಕ್ತರು ಕೇದಾರನಾಥ ದೇಗುಲಕ್ಕೆ ಭೇಟಿ ನೀಡಿದ್ದಾರೆ ಎಂದೂ ಸಮಿತಿ ಹೇಳಿದೆ.

12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥ ದೇಗುಲ 11 ಸಾವಿರ ಅಡಿಗಳಷ್ಟು ಎತ್ತರದಲ್ಲಿದೆ. ಚಳಿಗಾಲದಲ್ಲಿ ದೇಗುಲ ಹಿಮದಿಂದ ಆವೃತವಾಗುವ ಕಾರಣ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಗುತ್ತದೆ.

ದೇಗುಲದ ಬಾಗಿಲುಗಳನ್ನು ಮುಚ್ಚುವ ಮುನ್ನ ಅಲ್ಲಿರುವ ಶಿವನ ವಿಗ್ರಹವನ್ನು ಪಲ್ಲಕ್ಕಿ ಮೂಲಕ ಹೊರತರಲಾಗುತ್ತದೆ. ಚಳಿಗಾಲ ಮುಗಿಯುವವರೆಗೆ ರುದ್ರಪ್ರಯಾಗದಲ್ಲಿನ ಉಖಿಮಠದ ಓಂಕಾರೇಶ್ವರ ದೇಗುಲದಲ್ಲಿ ವಿಗ್ರಹವನ್ನಿಟ್ಟು ಪೂಜಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.