ಹಿಂಗೋಲಿ: ‘ಉದ್ಧವ್‌ಜೀ, ನಿಮಗೆ ಧೈರ್ಯವಿದ್ದರೆ, ವೀರ್ ಸಾವರ್ಕರ್, ಬಾಳಾ ಸಾಹೇಬ್ ಠಾಕ್ರೆ ಕುರಿತು ರಾಹುಲ್ ಗಾಂಧಿಯಿಂದ ಎರಡು ಒಳ್ಳೆಯ ಮಾತಗಳನ್ನು ಆಡಿಸಿ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸವಾಲೆಸಿದಿದ್ದಾರೆ.
ಮಹಾರಾಷ್ಟ್ರದ ಹಿಂಗೋಲಿಯಲ್ಲಿ ಪಕ್ಷದ ಪರ ಶುಕ್ರವಾರ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿಯಡಿ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸಲು ಕಾಂಗ್ರೆಸ್ ಬಯಸಿದೆ. ಸರಿಯಾಗಿ ಕೇಳಿಸಿಕೊಳ್ಳಿ, ನೀವು ಮಾತ್ರವಲ್ಲ, ನಿಮ್ಮ ನಾಲ್ಕನೇ ತಲೆಮಾರಿಗೂ ಕೂಡ ಅದನ್ನು ಮರುಸ್ಥಾಪಿಸಲು ಸಾಧ್ಯವಿಲ್ಲ’ ಎಂದು ತಿಳಿಸಿದರು.
‘ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಜಯಗಳಿಸಲಿದೆ ಎಂದು ರಾಹುಲ್ ಗಾಂಧಿ ಅವರು ಅಪರಿಮಿತ ವಿಶ್ವಾಸ ಹೊಂದಿದ್ದರು. ಫಲಿತಾಂಶ ಏನಾಯ್ತು ನೋಡಿ. ಕಾಂಗ್ರೆಸ್ ಪಕ್ಷವು ಹೀನಾಯವಾಗಿ ಸೋಲುಂಡು, ಬಿಜೆಪಿಯು ಅಲ್ಲಿ ಸರ್ಕಾರ ರಚಿಸಿತು’ ಎಂದು ವಿವರಿಸಿದರು.
20ನೇ ಬಾರಿ ಪತನ: ಸೋನಿಯಾ ಗಾಂಧಿ ಅವರು ತಮ್ಮ ಮಗನನ್ನು 20 ಬಾರಿ ಮುಂಚೂಣಿಗೆ ತರಲು ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ. ಅವರ ಮಗನ ‘ರಾಹುಲ್ ಗಾಂಧಿ ವಿಮಾನ’ವು 21ನೇ ಬಾರಿಯೂ ಮಹಾರಾಷ್ಟ್ರದಲ್ಲಿ ಪತನಗೊಳ್ಳಲಿದೆ’ ಎಂದರು.
ಮಹಾಯುತಿ ಮೈತ್ರಿಕೂಟವು ಛತ್ರಪತಿ ಶಿವಾಜಿ ಮಹಾರಾಜ್, ವೀರ್ ಸಾವರ್ಕರ್ ಹಾದಿ ಅನುಸರಿಸುತ್ತಿದ್ದು, ಮಹಾ ವಿಕಾಸ್ ಆಘಾಡಿಯು ‘ಔರಾಂಗಜೇಬ್ ಅಭಿಮಾನಿಗಳ ಸಂಘ‘ವಾಗಿದೆ ಎಂದು ಟೀಕಿಸಿದರು.
ಕರ್ನಾಟಕದಲ್ಲಿ ದೇವಾಲಯಕ್ಕೆ ಸೇರಿದ ಆಸ್ತಿಗಳನ್ನು ವಕ್ಫ್ ಆಸ್ತಿ ಎಂದು ಘೋಷಣೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ರಾಮಮಂದಿರ ನಿರ್ಮಾಣ ಕಾಂಗ್ರೆಸ್ ವಿರುದ್ದ ಗೃಹ ಸಚಿವ ಅಮಿತ್ ಶಾ ಟೀಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.